ಕಲಾಪ ನಡೆಯದೇ ಇರುವಾಗ ವೇತನವೂ ಬೇಡ ಎಂದ ಎನ್ ಡಿಎ ಸಂಸದರು!

ಗುರುವಾರ, 5 ಏಪ್ರಿಲ್ 2018 (11:22 IST)
ನವದೆಹಲಿ: ಸಂಸತ್ ಕಲಾಪ ನಡೆಯದೇ ಇರುವಾಗಲೂ ಸಂಸದರಿಗೆ ವೇತನ, ಭತ್ಯೆ ಯಾಕೆ? ಇದೇ ಕಾರಣಕ್ಕೆ ಆಡಳಿತಾರೂಢ ಎನ್ ಡಿಎ ಸಂಸದರು ಇದೀಗ ಕಲಾಪ ನಡೆಯದೇ ಇದ್ದ 23 ದಿನಗಳ ವೇತನ ಪಡೆಯದೇ ಇರಲು ನಿರ್ಧರಿಸಿದ್ದಾರೆ.

ಎನ್ ಡಿಎ ಸಂಸದರ ಈ ನಿರ್ಧಾರ ಪ್ರತಿಪಕ್ಷ ಕಾಂಗ್ರೆಸ್ ಗೆ ಮುಜುಗರ ಉಂಟುಮಾಡಲಿದೆ. ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಜೆಪಿಯ ಇತರ ಮೈತ್ರಿ ಪಕ್ಷಗಳೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅನಂತ ಕುಮಾರ್ ಹೇಳಿದ್ದಾರೆ.

ಸಂಸತ್ ನಲ್ಲಿ 20 ದಿನ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. 11 ಬಾರಿ ಕಲಾಪ ಮುಂದೂಡಲಾಗಿತ್ತು. ಈ ಸಂದರ್ಭದಲ್ಲಿ ನಡೆದ ಕಲಾಪದ ನೆಪದಲ್ಲಿ ವೃಥಾ ಜನರ ಹಣವನ್ನು ವೇತನ ರೂಪದಲ್ಲಿ ಪಡೆಯುವ ಹಕ್ಕು ನಮಗಿಲ್ಲ ಎಂದು ಅನಂತ ಕುಮಾರ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ