ಪಾಕಿಸ್ತಾನಿಯರನ್ನು ಗುರುತಿಸಿ, ಅವರ ದೇಶಕ್ಕೇ ಕಳುಹಿಸಿ: ಎಲ್ಲಾ ಮುಖ್ಯಮಂತ್ರಿಗಳಿಗೆ ಅಮಿತ್ ಶಾ ಆದೇಶ
ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಬಳಿಕ ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿರುವ ಪಾಕಿಸ್ತಾನಿಯರಿಗೆ ತಕ್ಷಣವೇ ದೇಶ ಬಿಟ್ಟು ಹೊರಡಲು ಸೂಚನೆ ನೀಡಿತ್ತು. ಇದಕ್ಕೆ 48 ಗಂಟೆಗಳ ಗಡುವೂ ನೀಡಿತ್ತು. ಹಾಗಿದ್ದರೂ ಕೆಲವು ಕಡೆ ಇನ್ನೂ ಹಲವು ನೆಪ ಹೇಳಿಕೊಂಡು ಪಾಕಿಸ್ತಾನಿಯರು ಇಲ್ಲೇ ಬಾಕಿಯಿದ್ದಾರೆ.
ಅಂತಹವರನ್ನು ಅವರ ದೇಶಕ್ಕೇ ಕಳುಹಿಸಿ ಎಂದು ಅಮಿತ್ ಶಾ ಆದೇಶ ನೀಡಿದ್ದಾರೆ.
ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಏಟು ಕೊಡಲು ಭಾರತ ಸರ್ಕಾರ ನಿರ್ಧರಿಸಿದ್ದು ಅದರ ಅಂಗವಾಗಿ ಪಾಕಿಸ್ತಾನಿಯರಿಗೆ ಭಾರತ ಪ್ರವೇಶ ನಿರಾಕರಿಸಿದೆ.
ಈಗಾಗಲೇ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನೀಡಲಾಗಿದ್ದರೆ ಅದು ಏಪ್ರಿಲ್ 27 ರ ನಂತರ ಅಧಿಕೃತವಾಗಿ ರದ್ದಾಗಲಿದೆ ಎಂದು ಈಗಾಗಲೇ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ. ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದರೆ ಏಪ್ರಿಲ್ 29 ರವರೆಗೆ ಮಾತ್ರ ಅನುಮತಿಯಿರಲಿದೆ. ಹೀಗಾಗಿ ಈಗ ಗೃಹಸಚಿವರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪಾಕಿಸ್ತಾನಿಯರನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ.