Pehalgam: ಪಹಲ್ಗಾಮ್ ದಾಳಿಯಲ್ಲಿ ಗಾಯಗೊಂಡವರಿಗಾಗಿ ಹಗಲು ರಾತ್ರಿ ಚಿಕಿತ್ಸೆ ನೀಡಿದ ವೈದ್ಯ ಹೀರೋಗಳು ಇವರೇ ನೋಡಿ
ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಗೆ 26 ಮಂದಿ ಸಾವನ್ನಪ್ಪಿದ್ದರು. ಆದರೆ ಹಲವರು ಗಾಯಗೊಂಡಿದ್ದಾರೆ. ತಪ್ಪಿಸಿಕೊಂಡು ಓಡುವ ಭರದಲ್ಲಿ ಪೆಟ್ಟು ಮಾಡಿಕೊಂಡವರು ಅನೇಕರಿದ್ದರು. ಇವರೆಲ್ಲರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಗಾಯಾಗಳುಗಳಿಗೆ ಈ ವೈದ್ಯರ ತಂಡ ಹಗಲು ರಾತ್ರಿಯೆನ್ನದೇ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಕೆಲಸ ಮಾಡಿದೆ. ಇವರಲ್ಲಿ ಅನೇಕರು ಪುರುಷ ವೈದ್ಯರಾಗಿದ್ದರೆ ಮತ್ತೆ ಕೆಲವು ಮಹಿಳಾ ವೈದ್ಯರೂ ಸೇರಿದ್ದಾರೆ.
ಈ ಹೀರೋಗಳಿಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇವರೂ ಒಂದು ರೀತಿಯಲ್ಲಿ ಸೈನಿಕರೇ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.