ನವದೆಹಲಿ: ಡಿವೋರ್ಸ್‌, ವ್ಯವಹಾರದಲ್ಲಿ ಕಲಹಕ್ಕೆ ಭೇಸತ್ತು ಉದ್ಯಮಿ ಆತ್ಮಹತ್ಯೆ

Sampriya

ಬುಧವಾರ, 1 ಜನವರಿ 2025 (16:45 IST)
ನವದೆಹಲಿ: ಡಿವೋರ್ಸ್‌ ಬೆನ್ನಲ್ಲೇ ಮಾಜಿ ಪತ್ನಿ ಜತೆಗಿನ ವ್ಯವಹಾರದ ವಿಚಾರವಾಗಿ ನಡೆದ ಕಲಹದಿಂದಾಗಿ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ದೆಹಲಿಯಲ್ಲಿ ನಡೆದಿದೆ. ಇಲ್ಲಿನ ಉದ್ಯಮಿಯೊಬ್ಬರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ.

ಖುರಾನಾ ಮತ್ತು ಅವರ ಪತ್ನಿ ಮಾಣಿಕಾ ಜಗದೀಶ್ ಪಹ್ವಾ ಜೊತೆಗಿನ ವಿಚ್ಛೇದನ ಹಾಗೂ ಕೆಫೆ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ನಡುವೆಯೇ ಈ ಘಟನೆ ನಡೆದಿದೆ.

ರಾಷ್ಟ್ರ ರಾಜಧಾನಿಯಲ್ಲಿ ವುಡ್‌ಬಾಕ್ಸ್ ಕೆಫೆ ಹೊಂದಿದ್ದ ದಂಪತಿ ಜಂಟಿಯಾಗಿ ವ್ಯವಹಾರ ನಡೆಸುತ್ತಿದ್ದರು. ಇಬ್ಬರ ನಡುವೆ ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಏರ್ಪಟ್ಟಿತ್ತು. ಅಲ್ಲದೇ ದಾಂಪತ್ಯ ಜೀವನದಲ್ಲೂ ಕಲಹದಿಂದಾಗಿ ಈ ಜೋಡಿ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದರು.

ಇವರಿಬ್ಬರು 2016ರಲ್ಲಿ ಮದುವೆಯಾಗಿದ್ದರು, ಪತ್ನಿ ಮೇಲೆ ಖುರಾನಾಗೆ ಅಸಮಾಧಾನ ಇತ್ತು ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಡಿಯೋದಲ್ಲಿ ನಾವಿಬ್ಬರೂ ಡಿವೋರ್ಸ್‌ ಪಡೆದುಕೊಳ್ಳೋಣ. ಆದ್ರೆ ವಿಚ್ಛೇದನದ ನಂತರವೂ ವ್ಯವಹಾರದಲ್ಲಿ ಪಾಲುದಾರಳಾಗಿರುತ್ತೇನೆ. ನೀವು ನನ್ನ ಬಾಕಿ ಸಾಲವನ್ನ ತೀರಿಸಬೇಕು ಎಂದು ಖುರಾನಾ ಪತ್ನಿ ಮನಿಕಾ ಹೇಳಿದ್ದಾರೆ. ಘಟನೆಯ ಬಳಿಕ ಪೊಲೀಸರು ಖುರಾನಾ ಪತ್ನಿಯ ಫೋನನ್ನು ವಶಕ್ಕೆ ಪಡೆದಿದ್ದು, ಆಕೆಯನ್ನು ವಿಚಾರಣೆಗೆ ಕರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ