ಅಸ್ಸಾಂನಲ್ಲಿ ಹೊಸ ನಿಯಮ : ಹೊಸ ನಿಯಮಗಳಲ್ಲಿ ಏನಿದೆ?

ಬುಧವಾರ, 24 ಆಗಸ್ಟ್ 2022 (08:50 IST)
ಗುವಾಹಟಿ : ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಡಿ ಇಬ್ಬರು ಧರ್ಮಗುರುಗಳ ಬಂಧನದ ಬೆನ್ನಲ್ಲೇ ಅಸ್ಸಾಂನಲ್ಲಿ ಹೊರ ರಾಜ್ಯಗಳಿಂದ ಬರುವ ಧರ್ಮಗುರುಗಳು ಹೊಸ ನಿಯಮಗಳನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
 
ಅಸ್ಸಾಂ ಮಸೀದಿಗಳು ಮತ್ತು ಮದರಸಾಗಳಲ್ಲಿನ ಧರ್ಮಗುರುಗಳು ರಾಜ್ಯದ ಹೊರಗಿನಿಂದ ಬಂದರೆ ಸರ್ಕಾರಿ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದು ಸಿಎಂ ಸೂಚಿಸಿದ್ದಾರೆ. 
ಬಂಧಿತರಲ್ಲಿ ಒಬ್ಬ ಮಸೀದಿಯಲ್ಲಿ ಇಮಾಮ್ ಆಗಿ ಕೆಲಸ ಮಾಡುತ್ತಿದ್ದ. ಹಲವು ಗ್ರಾಮಗಳಲ್ಲಿ ಜಿಹಾದಿ ಜಾಲವನ್ನು ವಿಸ್ತರಿಸಿದ್ದ. ಜಿಹಾದಿ ಜಾಲವನ್ನು ವಿಸ್ತರಿಸುವುದಕ್ಕಾಗಿ ಆರು ಬಾಂಗ್ಲಾದೇಶಿ ಪ್ರಜೆಗಳು ಅಸ್ಸಾಂ ಪ್ರವೇಶಿಸಿದ್ದರು.

ಆರು ಬಾಂಗ್ಲಾದೇಶಿ ಪ್ರಜೆಗಳ ಪೈಕಿ ಒಬ್ಬರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದು, ಐವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಅಸ್ಸಾಂ ಪೊಲೀಸರು ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ನಾವು ಈಗ ಕೆಲವು ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಮಾಡಿದ್ದೇವೆ. ಯಾವುದೇ ಇಮಾಮ್ ಗ್ರಾಮಕ್ಕೆ ಬಂದರೆ, ನೀವು ಪರಿಶೀಲನೆಗಾಗಿ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು. ಪೊಲೀಸರು ಪರಿಶೀಲಿಸಿದ ನಂತರ, ಜನರು ಅವರನ್ನು ಇಮಾಮ್ ಆಗಿ ನೇಮಿಸಿಕೊಳ್ಳಬಹುದು. ಅಸ್ಸಾಂನ ಮುಸ್ಲಿಂ ಸಮಾಜವು ಈ ಕುರಿತು ನಮಗೆ ತಮ್ಮ ಬೆಂಬಲವನ್ನು ನೀಡುತ್ತಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ