ನಿರ್ಭಯಾ ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಕೆಲವೇ ದಿನ ಬಾಕಿ
ಈ ಶಿಕ್ಷೆ ಇನ್ನು ಒಂದು ತಿಂಗಳ ಬಳಿಕ ಜಾರಿಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಆರೋಪಿಗಳು ತಿಹಾರ್ ಜೈಲ್ ನಲ್ಲಿದ್ದು, ಅಲ್ಲಿಯೇ ಗಲ್ಲು ಶಿಕ್ಷೆ ಜಾರಿಯಾಗಲಿದೆ. ಆದರೆ ಸದ್ಯಕ್ಕೆ ಇವರನ್ನು ಗಲ್ಲಿಗೇರಿಸುವ ತಜ್ಞರು ಇಲ್ಲ ಎನ್ನುವುದೇ ಜೈಲು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಇದೇ ಜೈಲ್ ನಲ್ಲಿ ಉಗ್ರ ಅಫ್ಜಲ್ ಗುರುವಿಗೆ ಕೊನೆಯದಾಗಿ ಗಲ್ಲು ಶಿಕ್ಷೆ ಜಾರಿ ಮಾಡಲಾಗಿತ್ತು. ಇದಾದ ಬಳಿಕ ಇಲ್ಲೀಗ ನಿರ್ಭಯಾ ರೇಪ್ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ.