ಕೇಂದ್ರ ಮಂಡಿಸೋ ಬಜೆಟ್ ಮೇಲೆ ರಾಜ್ಯದ ಕಣ್ಣು

ಗುರುವಾರ, 4 ಜುಲೈ 2019 (19:34 IST)
ಎನ್ ಡಿ ಎ ನೇತೃತ್ವದ ಕೇಂದ್ರ ಸರಕಾರ ಮಹತ್ವದ ಬಜೆಟ್ ಮಂಡಿಸಲು ಕ್ಷಣಗಣನೆ ಆರಂಭಗೊಂಡಿದ್ದು, ಕೇಂದ್ರದ ಬಜೆಟ್ ನತ್ತ ರಾಜ್ಯದ, ರಾಷ್ಟ್ರದ ಜನರ ಚಿತ್ತ ಹರಿದಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 8 ರಂದು ಲೋಕಸಭೆಯಲ್ಲಿ ಮೊದಲ ಬಜೆಟ್ ಮಂಡನೆ ಮಾಡಲಿದ್ದಾರೆ.

ಆರ್ಥಿಕ ಚೇತರಿಕೆಗೆ ಒತ್ತು, ಉದ್ಯೋಗ ಸೃಷ್ಟಿ, 5 ಜಿ ತರಂಗಾಂತರ ಮಾರಾಟದಿಂದ ಹಣ ಸಂಗ್ರಹಣೆ ಸೇರಿದಂತೆ ಹಲವು ಗುರಿಗಳನ್ನು ಇಟ್ಟುಕೊಂಡು ಬಜೆಟ್ ಮಂಡನೆ ಮಾಡಲಿದ್ದಾರೆ.

ಇದೇ ವೇಳೆ, ಕೇಂದ್ರ ಸಚಿವೆ ಮಂಡಿಸಲಿರುವ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವ ಕ್ಷೇತ್ರದಲ್ಲಿ ಹಾಗೂ ಎಷ್ಟು ಅನುದಾನ ಸಿಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ