ನಿತೀಶ್ ಕುಮಾರ್‌ಗೆ ಗಲ್ಲು ಶಿಕ್ಷೆಯಾಗಬಹುದು: ಲಾಲು ಯಾದವ್

ಬುಧವಾರ, 26 ಜುಲೈ 2017 (20:19 IST)
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ 1991ರಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಹತ್ಯೆ ಪ್ರಕರಣದಲ್ಲಿ ನಿತೀಶ್‌ಗೆ ಗಲ್ಲು ಶಿಕ್ಷೆಯಾಗಬಹುದು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.

ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಾಗ್ದಾಳಿ ನಡೆಸಿದ ಲಾಲು, ಬಿಹಾರ್‌ದಲ್ಲಿ ರಾಷ್ಟ್ರಪತಿ ಅಡಳಿತವನ್ನು ನಾವು ಬಯಸುವುದಿಲ್ಲ. ಹೊಸ ನಾಯಕನ ಆಯ್ಕೆ ಮಾಡುತ್ತೇವೆ. ಹೊಸ ಸರಕಾರದಲ್ಲಿ ನೀವು ಬೇಡ, ತೇಜಸ್ವಿ ಕೂಡಾ ಬೇಡ. ಎಂದು ತಿಳಿಸಿದ್ದಾರೆ.
 
ಆರ್‌ಜೆಡಿ, ಕಾಂಗ್ರೆಸ್ ಮತ್ತು ಜೆಡಿಯು ನಿಂದ ಹೊಸ ನಾಯಕನ ಆಯ್ಕೆ ಮಾಡಲಾಗುವುದು. ಹೊಸ ಸರಕಾರ ರಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಗುಡುಗಿದ್ದಾರೆ.
 
ಬಿಜೆಪಿ ಸಂಘಮುಕ್ತ ಭಾರತ ಬಯಸಿದ್ದ ನಿತೀಶ್ ಕುಮಾರ್, ಇದೀಗ ಬಿಜೆಪಿ, ಸಂಘ ಪರಿವಾರದೊಂದಿಗೆ ಸೆಟ್ಟಿಂಗ್ ಮಾಡಿಕೊಂಡಿದ್ದಾರೆ. ನಿತೀಶ್ ನೋಟ್ ಬ್ಯಾನ್ ಬಗ್ಗೆ ಹೊಗಳುತ್ತಾರೆ. ಆದರೆ, ಮೈತ್ರಿಯ ಬಗ್ಗೆ ಮಾತನಾಡುವುದಿಲ್ಲ. ಇದು ಏನು ಸೂಚಿಸುತ್ತೆ ಹೇಳಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ