ಅವಿಶ್ವಾಸ ಮತ: ಎನ್ ಡಿಎಗೆ ಉಲ್ಟಾ ಹೊಡೆಯಲಿರುವವರು ಇವರು!

ಶುಕ್ರವಾರ, 20 ಜುಲೈ 2018 (10:50 IST)
ನವದೆಹಲಿ: ಇಂದು ಸಂಸತ್ತಿನಲ್ಲಿ ಕೇಂದ್ರದ ಎನ್ ಡಿಎ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಬಗ್ಗೆ ಚರ್ಚೆ ಮತ್ತು ಮತ ನಡೆಯಲಿದ್ದು, ರಾಷ್ಟ್ರ ರಾಜಕಾರಣದ ಬಗ್ಗೆ ಭಾರೀ ಕುತೂಹಲ ಮೂಡಿದೆ.

ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಕೂಟ ಈ ಅವಿಶ್ವಾಸ ಮತ ಗೆಲ್ಲುವ ಎಲ್ಲಾ ವಿಶ್ವಾಸ ಹೊಂದಿದೆ. ಆದರೆ ಬಿಜೆಪಿ ಮೈತ್ರಿ ಕೂಟಕ್ಕೆ ಸೆಡ್ಡು ಹೊಡೆಯಲು ಶಿವಸೇನೆ ಮತ್ತು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ನಿರ್ಧರಿಸಿದ್ದಾರೆ.

ಅಮಿತ್ ಶಾ ಸ್ವತಃ ಫೋನ್ ಮಾಡಿ ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆಗೆ ಎನ್ ಡಿಎ ಪರ ಮತ ಹಾಕುವಂತೆ ಕೋರಿದ್ದರು. ಆದರೆ ಆಗ ಒಪ್ಪಿದ್ದ ಶಿವಸೇನೆ ಬಳಿಕ ಉಲ್ಟಾ ಹೊಡೆದಿದೆ. ಇನ್ನು ಪ್ರಧಾನಿ ಮೋದಿ ವಿರುದ್ಧ ಸದಾ ಕಿಡಿ ಕಾರುವ ಬಿಜೆಪಿ ಸಂಸದ ಶತ್ರುಘ್ನಾ ಸಿನ್ಹಾ ಕೂಡಾ ಸರ್ಕಾರದ ವಿರುದ್ಧ ಮತ ಹಾಕಲು ತೀರ್ಮಾನಿಸಿದ್ದಾರೆ.

ಆದರೆ ಅವಿಶ್ವಾಸ ಮಂಡಿಸಿರುವ ಟಿಡಿಪಿಗೆ ಬೆಂಬಲ ಸೂಚಿಸದೇ ಇರಲು ತಮಿಳುನಾಡಿನ ಎಐಎಡಿಎಂಕೆ ತೀರ್ಮಾನಿಸಿದರೆ, ತೆಲಂಗಾಣದ ಟಿಆರ್ ಎಸ್ ಪಕ್ಷ ಕೇಂದ್ರದ ಪರ ಮತ ಹಾಕಲು ತೀರ್ಮಾನಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ