ಕೆಮ್ಮುವ, ಸೀನುವ ಕಾಮುಕರಿಗೆ ವೇಶ್ಯಾಗೃಹಕ್ಕೂ ನೋ ಎಂಟ್ರಿ!

ಬುಧವಾರ, 16 ಸೆಪ್ಟಂಬರ್ 2020 (11:47 IST)
ಮುಂಬೈ: ಕೊರೋನಾ ಜನರನ್ನು ಯಾವ ಮಟ್ಟಿಗೆ ತಂದಿಟ್ಟಿದೆಯೆಂದರೆ, ವೇಶ್ಯಾಗೃಹದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಂತಕ್ಕೆ ತಲುಪಿಸಿದೆ!


ಪುಣೆಯಲ್ಲಿ ಲಾಕ್ ಡೌನ್ ಬಳಿಕ ವೇಶ್ಯಾಗೃಹಗಳನ್ನು ತೆರೆಯಲಾಗುತ್ತಿದ್ದು, ಇಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಕೆಲವು ಸಲಹೆ ಸೂಚನೆ ನೀಡಲಾಗಿದೆ. ಕೆಮ್ಮು, ಸೀನುತ್ತಿರುವ ವ್ಯಕ್ತಿಗಳಿಗೆ ಎಂಟ್ರಿ ಕೊಡಬೇಡಿ. ವೇಶ್ಯಾಗೃಹಕ್ಕೆ ಬರುವ ಎಲ್ಲರಿಗೂ ಸ್ಯಾನಿಟೈಸೇಷನ್ ಕಡ್ಡಾಯಗೊಳಿಸಬೇಕು. ಹಾಗೂ ಲೈಂಗಿಕ ಕಾರ್ಯಕರ್ತೆಯರೂ ಆಗಾಗ ಕೈ ತೊಳೆಯುತ್ತಿರಬೇಕು ಎಂದು ಸೂಚನೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ