ಆಕ್ಸಫರ್ಡ್ ವಿಶ್ವವಿದ್ಯಾಲಯ : ಕೊರೊನಾ ಲಸಿಕೆ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್

ಶನಿವಾರ, 12 ಸೆಪ್ಟಂಬರ್ 2020 (22:50 IST)

ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರಿದ ಕಾರಣದಿಂದ ಸ್ಥಗಿತಗೊಂಡಿದ್ದ ಲಸಿಕೆಯ ಪ್ರಯೋಗಕ್ಕೆ ಮತ್ತೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
 

ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರೋ ಜೆನಕಾ ಸೇರಿಕೊಂಡು ಅಭಿವೃದ್ಧಿಪಡಿಸುತ್ತಿರುವ ಕೊರೊನೊ ಲಸಿಕೆ ಕೆಲವು ಸ್ವಯಂ ಸೇವಕರ ಮೇಲೆ ಅಡ್ಡ ಪರಿಣಾಮ ಬೀರಿತ್ತು.

ಹೀಗಾಗಿ ಸ್ಥಗಿತಗೊಳಿಸಲಾಗಿದ್ದ ಲಸಿಕೆ ಸುರಕ್ಷಿತ ಎನ್ನುವುದು ಖಾತ್ರಿಯಾಗಿದ್ದು, ಮತ್ತೆ ಪ್ರಯೋಗ ಶುರುವಾಗಿದೆ.

ಇಂಗ್ಲೆಂಡ್, ಭಾರತ, ಅಮೆರಿಕ, ಬ್ರೆಜಿಲ್ ಸೇರಿದಂತೆ ಇತರ ದೇಶಗಳಲ್ಲಿ ಲಸಿಕೆ ಪ್ರಯೋಗ ಮತ್ತೆ ಶುರುವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ