ನವದೆಹಲಿ: ನೋಟ್ ಬ್ಯಾನ್ ಒಂದು ಐತಿಹಾಸಿಕ ಕ್ರಮ. ಇದರಿಂದ ಉಗ್ರರಿಗೆ ಫಂಡಿಂಗ್ ಮಾಡುವುದಕ್ಕೆ ಲಗಾಮು ಬಿದ್ದಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನೋಟ್ ಬ್ಯಾನ್ ಗೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೋಟು ನಿಷೇಧದಿಂದ ಬ್ಯಾಂಕ್ ಗಳಿಗೆ ಹಣ ಹರಿದು ಬಂದಿದೆ. ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲು ಅನುಕೂಲವಾಯ್ತು. ಮುಖ್ಯವಾಗಿದೆ ಉಗ್ರರಿಗೆ ಫಂಡಿಂಗ್ ಮಾಡುವುದಕ್ಕೆ ಲಗಾಮು ಬಿದ್ದಿದೆ ಎಂದರು.
ಕಪ್ಪುಹಣ ನಿಗ್ರಹಕ್ಕೆ ನೋಟ್ ಬ್ಯಾನ್ ನಿಂದ ಅನುಕೂಲವಾಗಿದೆ. ಕ್ಯಾಶ್ ಲೆಸ್ ವ್ಯವಹಾರದಿಂದ ಸ್ವಚ್ಛ ಅರ್ಥವ್ಯವಸ್ಥೆ ಸಾಧ್ಯ. ನೋಟ್ ಬ್ಯಾನ್ ಒಂದು ಲೂಟಿ ಎಂದು ಕಾಂಗ್ರೆಸ್ ಕರೆದಿದೆ. ಲೂಟಿ ಅಂದರೆ 2ಜಿ ಹಗರಣ, ಸಿಡಬ್ಲ್ಯೂಜಿ ಹಗರಣಗಳಲ್ಲಾಗಿದ್ದು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಕೇವಲ ಒಂದು ಪರಿವಾರದ ಸೇವೆಗಷ್ಟೇ ಸೀಮಿತ. ಆದರೆ ನಾವು ಸೇವೆಗೆ ಹೆಚ್ಚಿನ ಒತ್ತು ನೀಡಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ.