ಈಗ ಕೇರಳದಲ್ಲಿ ನಂದಿನಿ ಹಾಲಿಗೆ ವಿರೋಧ?

ಶನಿವಾರ, 15 ಏಪ್ರಿಲ್ 2023 (12:55 IST)
ತಿರುವನಂತಪುರಂ : ಕರ್ನಾಟಕದಲ್ಲಿ ಅಮೂಲ್ ಹಾಲಿಗೆ ವಿರೋಧ ವ್ಯಕ್ತವಾಗುತ್ತಿದಂತೆ ಕೇರಳದಲ್ಲಿ ಈಗ ನಂದಿನಿ ಹಾಲಿಗೆ ವಿರೋಧ ವ್ಯಕ್ತವಾಗುತ್ತಿದೆ.
 
ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಕೇರಳದಲ್ಲಿ ಮಿಲ್ಮಾ ಹಾಲನ್ನು ಮಾರಾಟ ಮಾಡುತ್ತಿದೆ. ಈಗ ಕೆಸಿಎಂಎಂಎಫ್ ಕೇರಳದಲ್ಲಿ ನಂದಿನಿ ಹಾಲು ಮಾರಾಟವಾಗುತ್ತಿರುವುದನ್ನು ಅನೈತಿಕ ಎಂದು ಹೇಳಿದೆ.

 ಕೇರಳದ ಕೆಲವು ಭಾಗಗಳಲ್ಲಿ ನಂದಿನಿ ಬ್ರಾಂಡ್ ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡಲು ಕರ್ನಾಟಕ ಹಾಲು ಒಕ್ಕೂಟ ಮಳಿಗೆಗಳನ್ನು ತೆರೆದಿದೆ. ಇದು ಭಾರತದ ಡೈರಿ ಕ್ಷೇತ್ರದ ಮೂಲಾಧಾರವಾಗಿರುವ ಸಹಕಾರಿ ಮನೋಭಾವವನ್ನು ಉಲ್ಲಂಘಿಸಿದೆ ಎಂದು ಕೆಸಿಎಂಎಂಎಫ್ ಆರೋಪಿಸಿದೆ. 

ಈ ಸಂಬಂಧ ಮಿಲ್ಮಾ ಅಧ್ಯಕ್ಷ ಕೆಎಸ್ ಮಣಿ ಪ್ರತಿಕ್ರಿಯಿಸಿ, ಇತ್ತೀಚೆಗೆ ಕೆಲವು ರಾಜ್ಯಗಳ ಹಾಲು ಮಾರಾಟ ಒಕ್ಕೂಟಗಳು ತಮ್ಮ ಪ್ರಮುಖ ಉತ್ಪನ್ನಗಳನ್ನು ತಮ್ಮ ರಾಜ್ಯದ ಹೊರಗಡೆ ಮಾರಾಟ ಮಾಡುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ಫೆಡರಲ್ ತತ್ವಗಳು ಮತ್ತು ಸಹಕಾರ ಮನೋಭಾವವನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ