ದುರ್ಗಾ ಪೂಜೆ ಮಾಡಿ ಇಸ್ಲಾಮೀ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದ ಸಂಸದೆ ನುಸ್ರತ್ ಜಹಾನ್

ಮಂಗಳವಾರ, 8 ಅಕ್ಟೋಬರ್ 2019 (07:29 IST)
ಕೋಲ್ಕತ್ತಾ: ಚಿತ್ರ ನಟಿ ಹಾಗೂ ತೃಣ ಮೂಲ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಅವರು ದುರ್ಗಾ ಪೂಜೆಯಲ್ಲಿ ಪಾಲ್ಗೊಂಡು ಕೆಲ ಇಸ್ಲಾಮೀ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿಖಿಲ್ ಜೈನ್ ಅವರನ್ನು ವಿವಾಹವಾದ ನುಸ್ರತ್ ಜಹಾನ್ ಅವರು ಕುಂಕುಮ, ಮಂಗಳಸೂತ್ರ ಧರಿಸಿ ತಮ್ಮ ಪತಿಯ ಜೊತೆ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಬಾರೀ ವೈರಲ್ ಆಗಿದೆ.


ಇದಕ್ಕೆ ಕೆಂಡಮಂಡಲರಾದ ಸುನ್ನಿ ಪಂಥಕ್ಕೆ ಸೇರಿದ ಧರ್ಮಗುರು ಮುಫ್ತಿ ಅಸದ್ ಖಾಸ್ಮಿ ಅವರು, 'ಅಲ್ಲಾಹುವಿಗೆ ಮಾತ್ರ ಪ್ರಾರ್ಥಿಸಬೇಕು ಎಂದು ಇಸ್ಲಾಮ್ ಧರ್ಮ ತನ್ನ ಹಿಂಬಾಲಕರಿಗೆ ಆದೇಶಿಸಿದೆ. ಆದರೂ ಕೂಡ ಆಕೆ ಹಿಂದೂ ದೇವರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅವರು ಮಾಡಿದ ಕೆಲಸ ಹರಾಮ್ ಆಗಿದೆ. ಮುಸ್ಲಿಮ್ ಹೆಸರು ಇಟ್ಟುಕೊಂಡು ಇಸ್ಲಾಮ್ ಮತ್ತು ಮುಸ್ಲಿಮರಿಗೆ ಕೆಟ್ಟ ಹೆಸರು ತರುವುದಕ್ಕೆ ಧರ್ಮದಲ್ಲಿ ಅವಕಾಶವಿಲ್ಲ. ಆಕೆ ತನ್ನ ಹೆಸರು ಮತ್ತು ಧರ್ಮವನ್ನು ಬದಲಿಸಿಕೊಳ್ಳಬೇಕು ' ಎಂದು ಸಂಸದೆ ನುಸ್ರತ್ ಜಹಾನ್ ವಿರುದ್ಧ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ