ಒಮಿಕ್ರಾನ್ : ಅವಧಿಗೂ ಮುನ್ನವೇ ಮಗು ಜನನ?!

ಶುಕ್ರವಾರ, 21 ಜನವರಿ 2022 (09:33 IST)
ಇದು ಕೊರೋನಾವೇ ಅಥವಾ ಬೇರೆ ಇನ್ಯಾವುದೋ ಸಮಸ್ಯೆಯೇ ಎನ್ನುವುದನ್ನು ತಿಳಿಯಲು ಮುಂದಾಗುವ ಆಸಕ್ತಿಯೂ ಇಂದು  ಯಾರಿಗೂ ಇಲ್ಲ.
 
ಏಕೆಂದರೆ, ಈಗ ಕೊರೋನಾ , ಒಮಿಕ್ರಾನ್ ಗಳ ಜತೆಗೆ ಸೀಸನಲ್ ಫ್ಲೂ  ಕೂಡ ಸೇರಿಕೊಂಡು ಜನರನ್ನು ಬಾಧಿಸುತ್ತಿದೆ. ಜ್ವರ ಕಡಿಮೆಯಾಗಿ, ಮಾಮೂಲಿ ದಿನಚರಿಗೆ ಮರಳಿದರೆ ಸಾಕು, ಟೆಸ್ಟುಗಳ ಸಹವಾಸ ಯಾರಿಗೆ ಬೇಕು ಎನ್ನುತ್ತಾರೆ. ಆದರೆ, ಮನೆಯಲ್ಲಿ ಗರ್ಭಿಣಿಯರಿದ್ದರೆ ಈ ನಿರ್ಲಕ್ಷ್ಯ ಸಲ್ಲದು, ಹೆಚ್ಚು ಎಚ್ಚರಿಕೆ ವಹಿಸಬೇಕು.

ಗರ್ಭಿಣಿಯರಿಗೆ ಒಮಿಕ್ರಾನ್ ಅಥವಾ ಕೊರೋನಾ ಸೋಂಕು ಬಾಧಿಸದಂತೆ ಕಾಳಜಿ ವಹಿಸಬೇಕು. ಒಂದೊಮ್ಮೆ ಅವರಿಗೆ ಸೋಂಕು ತೀವ್ರವಾಗಿ ಬಾಧಿಸಿದರೆ ಪ್ರಿಮ್ಯಚೂರ್  ಅಂದರೆ ಅವಧಿಗೂ ಮುನ್ನವೇ ಮಗು ಜನಿಸುವ ಅಪಾಯವುಂಟಾಗಬಹುದು. ಸ್ತ್ರೀರೋಗ  ತಜ್ಞರ ಪ್ರಕಾರ, ಗರ್ಭಿಣಿಯರಿಗೆ ಕೊರೋನಾ ಬಂದರೆ ಎಲ್ಲಕ್ಕಿಂತ ಹೆಚ್ಚಿನ ಅಪಾಯದ ಸಾಧ್ಯತೆ ಇರುವುದು  ಇಲ್ಲಿಯೇ.

ತೀವ್ರವಾಗಿ ಜ್ವರ ಬಂದ ಗರ್ಭಿಣಿಯರಿಗೆ ಅವಧಿಗಿಂತ ಮುನ್ನವೇ ಹೆರಿಗೆ  ನೋವು ಶುರುವಾದ ಹಲವಾರು ಪ್ರಕರಣಗಳಿವೆ. ಆಗ ಪ್ರಿಮ್ಯಾಚೂರ್ ಡಿಲೆವರಿ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಜತೆಜತೆಗೆ, ಮಗುವಿನ ಜೀವಕ್ಕೂ ಅಪಾಯವಾಗಬಲ್ಲದು. ಹೀಗಾಗಿ, ಗರ್ಭೀಣಿಯರ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸಬೇಕು.

ಹೆರಿಗೆ ಸಮಯದಲ್ಲಿ ಅಮ್ಮ ಪಾಸಿಟಿವ್ ಆಗಿದ್ದರೂ ನಿರ್ಯೋಚನೆಯಿಂದ ತನ್ನ ಮಗುವಿಗೆ ಹಾಲೂಡಬಹುದು. ಕಳೆದ ಬಾರಿಯ ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಬಹಳಷ್ಟು ತಾಯಂದಿರುವ ಕೊರೋನಾಪೀಡಿತರಾಗಿ ಮಕ್ಕಳಿಗೆ ಹಾಲೂಡುವುದನ್ನು ಬಿಟ್ಟುಬಿಟ್ಟಿದ್ದರು. ಆದರೆ, ಇದು ಸರಿಯಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ