ಓಮಿಕ್ರಾನ್ : ಭಾರತಕ್ಕೆ ಇಷ್ಟೊಂದು ನಡುಕ ಹುಟ್ಟಿಸಿದ್ದೇಕೆ?

ಸೋಮವಾರ, 29 ನವೆಂಬರ್ 2021 (09:30 IST)
ಕೊರೋನಾ ಎಂದರೆ ಸಾಕು ಬಹುತೇಕ ನಿದ್ರೆ ಮಾಡುತ್ತಿರುವ ಮಂದಿ ಕೂಡ ಗಾಬರಿಗೊಂಡು ಎಚ್ಚರವಾಗಿ ಕುಳಿತು ಬಿಡುತ್ತಾರೆ.
ಅಷ್ಟರ ಮಟ್ಟಿಗೆ ಕಳೆದ ಎರಡು ವರ್ಷಗಳು ಇದರಿಂದ ನಾವು ತೊಂದರೆಯನ್ನು ಅನುಭವಿಸಿದ್ದೇವೆ. ಸಂಬಂಧಗಳಿಗೆ ಕೊಳ್ಳಿ ಇಡುವ ವೈರಸ್ ಇದು ಎಂದರೆ ತಪ್ಪಾಗಲಾರದು. ಪತ್ತೆಯಾದ ಪ್ರತಿಯೊಂದು ಹೊಸ ತಳಿ ಕೂಡ ತನ್ನದೇ ಆದ ಸಾವಿನ ಇತಿಹಾಸವನ್ನು ಬರೆದು ಸ್ವಲ್ಪ ಮಟ್ಟಿಗೆ ಮರೆಯಾಗಿದೆ.
ಈಗ ಅಂತಹದೇ ಒಂದು ಮತ್ತೊಂದು ಇತಿಹಾಸವನ್ನು ಬರೆಯಲೇಬೇಕು ಎಂದು ದಕ್ಷಿಣ ಆಫ್ರಿಕಾದ ಮೂಲಕ ಪ್ರಪಂಚಕ್ಕೆ ಕಾಲಿಟ್ಟಿದೆ B.1.1.529 (ಓಮಿಕ್ರಾನ್) ಎಂಬ ಕೋವಿಡ್-19 ಹೊಸ ತಳಿ. ಇದನ್ನು ಕಂಡರೆ ಜನರಿಗೆ ಈಗಲೇ ನಡುಕ ಶುರುವಾಗಿದೆ.
ಡೇಂಜರ್ ಡೇಂಜರ್..!
ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟಮೊದಲ ಬಾರಿಗೆ ಕಂಡು ಬಂದ ಕೋವಿಡ್-19 ಹೊಸ ತಳಿ ಕೇವಲ ಅಲ್ಲಿನ ಜನರಿಗೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ಶಾಕ್ ಕೊಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ, ಯಾರು ಈಗಾಗಲೇ 2 ಡೋಸ್ ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ, ಅವರಿಗೂ ಕೂಡ ಸೋಂಕು ಹರಡಿಸುವ ಶಕ್ತಿಯನ್ನು ಈ ಹೊಸ ತಳಿ ಹೊಂದಿದೆ.
ಇದು ಕೇವಲ ಸೋಂಕುಕಾರಕ ಮಾತ್ರವಲ್ಲದೆ, ಅನುವಂಶೀಯ ಬದಲಾವಣೆಯಲ್ಲೂ ಕೂಡ ಮೇಲುಗೈ ಸಾಧಿಸಿದೆ ಎಂಬುದಾಗಿ ತಿಳಿದುಬಂದಿದೆ. ಜನರ ರೋಗನಿರೋಧಕ ಶಕ್ತಿಯ ಮೇಲೆ ಇದರ ಪ್ರಭಾವ ಇರಲಿದ್ದು, ಲಸಿಕೆ ಕೂಡ ಅಷ್ಟು ಪರಿಣಾಮಕಾರಿಯಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.
ಇತ್ತೀಚಿಗೆ ನಡೆದ ಸಂಶೋಧನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸದ್ಯ ಕಂಡು ಬಂದಿರುವ ಕೋವಿಡ್-19 ಹೊಸ ತಳಿ ಜನರಲ್ಲಿ ಸಾಕಷ್ಟು ವೇಗವಾಗಿ ಹರಡುತ್ತಿದೆ ಮತ್ತು ಇದು ಲಸಿಕೆ ಪಡೆದವರಲ್ಲಿ ಕೂಡ ಭಯವನ್ನು ಹುಟ್ಟುಹಾಕುತ್ತಿದೆ.
ಸಂಶೋಧಕರು ಹೇಳುವಂತೆ ಕೋವಿಡ್-19 ಹೊಸ ತಳಿ B.1.1.529 ಲಸಿಕೆ ಚಿಕಿತ್ಸೆ ಹಾಗೂ ಇತ್ಯಾದಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಲಸಿಕೆಗಳ ವಿರುದ್ಧ ಇದರ ಕಾರ್ಯ ಬೇರೆಯ ರೀತಿ ಕಂಡುಬಂದಿರುತ್ತದೆ. ಆದರೆ ಹೊಸದಾಗಿ ಇದು ಪತ್ತೆಯಾಗಿರುವ ಕಾರಣದಿಂದ ಇದರ ಬಗ್ಗೆ ಮತ್ತಷ್ಟು ಅಧ್ಯಯನದ ಅಗತ್ಯತೆ ಇದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ