ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಏನಿದೆ?

ಭಾನುವಾರ, 28 ನವೆಂಬರ್ 2021 (16:34 IST)
ಬೆಂಗಳೂರು : ಸೌತ್ ಆಫ್ರಿಕಾ , ಹಾಂಕಾಂಗ್ ದೇಶದಲ್ಲಿ ವೈರಸ್ ಪತ್ತೆಯಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು,
ಅಂತರ್ ರಾಜ್ಯ ಮತ್ತು ವಿದೇಶಿ ಪ್ರಯಾಣಿಕರ ಮೇಲೆ ಗಮನ ಇರಿಸುವಂತೆ ಸೂಚನೆ ನೀಡಿದೆ. ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿಕೊಂಡಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡು ಬಂದಿಲ್ಲ.
ರೂಪಾಂತರಿ ವೈರಸ್ ಹೆಚ್ಚು ವೇಗವಾಗಿ ಹರಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಈ ಮೊದಲು ಜಾರಿಗೆ ತಂದಿದ್ದ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಯನ್ನು ಇದೀಗ ಮತ್ತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಮಾರ್ಗಸೂಚಿಯಲ್ಲಿ ಏನಿದೆ?
1 ಕೇರಳ, ಮಹಾರಾಷ್ಟ್ರ ದಿಂದ ಬರುವ ವಿದ್ಯಾರ್ಥಿಗಳಿಗೆ 72 ಗಂಟೆ ಮುಂಚೆ ಖಖಿPಅಖ ಟೆಸ್ಟ್ ವರದಿ ಕಡ್ಡಾಯ
2.ಕಳೆದ 15 ದಿನಗಳಿಂದ ಕೇರಳ, ಮಹಾರಾಷ್ಟ್ರ ದಿಂದ ಬಂದ  ವಿದ್ಯಾರ್ಥಿಗಳು ಖಖಿPಅಖ ಟೆಸ್ಟ್ ಮಾಡಿಸುವುದು ಕಡ್ಡಾಯ
3.ಎರಡು ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು 7ನೇ ದಿನ ಖಖಿPಅಖ ಟೆಸ್ಟ್ ಮಾಡಿಸಬೇಕು
4.ನೆಗೆಟಿವ್ ಬಂದ ವಿದ್ಯಾರ್ಥಿಗಳು ಕ್ವಾರಂಟೈನ್ ಇರಬೇಕು, 7ನೇ ದಿನ ಮತ್ತೆ ಖಖಿPಅಖ ಟೆಸ್ಟ್ ಮಾಡಿಸಬೇಕು
5.ಎರಡು ರಾಜ್ಯಗಳ ಗಡಿಗಳ ಅಂಟಿಕೊಂಡಿರುವ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್, ಸ್ಕ್ರೀನಿಂಗ್ ಸೂಚನೆ
6.ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ