ಕೋಮು ಗಲಭೆಗೆ ಪ್ರಚೋದನೆ ನೀಡುವ ಫೇಕ್ ಇಮೇಜ್ ಶೇರ್: ಬಿಜೆಪಿ ಬೆಂಬಲಿಗ ಅರೆಸ್ಟ್

ಭಾನುವಾರ, 9 ಜುಲೈ 2017 (12:28 IST)
ಕೋಲ್ಕತ್ತಾ:ಪಶ್ಚಿಮ ಬಂಗಾಳದ ಬದುರಿಯಾ ಮತ್ತು ಬಸಿರ್ಹಾಟ್‌ನಲ್ಲಿ ಉಂಟಾಗಿರುವ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಹಿಂದೂ ಮಹಿಳೆಯೊಬ್ಬರ ಸೆರಗನ್ನು ದುಷ್ಕರ್ಮಿಗಳು ಎಳೆಯುತ್ತಿರುವ ನಕಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
 
ಹರಿಯಾಣ ಬಿಜೆಪಿ ಘಟಕದ ವಿಜೇತಾ ಮಾಲಿಕ್‌ ಎಂಬುವವರು ’ಔರತ್‌ ಕಿಲೋನಾ ನಹ” ಎಂಬ ಚಿತ್ರದ ದೃಶ್ಯವನ್ನು ಈಗ ಕೋಮು ಹಿಂಸಾಚಾರ ಭುಗಿಲೇಳಲು ಇನ್ನಷ್ಟು ಪ್ರಚೋದನೆ ನೀಡುವ ರೀತಿಯಲ್ಲಿ ಸಾಮಾಜಿಕ ಜಾಲತಾನಗಳಲ್ಲಿ ಹರಿಯಬಿಟ್ಟಿದ್ದರು. ಇದು ದೇಶಾದ್ಯಂತ ವೈರಲ್‌ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ವಿಜೇತಾ ಮಾಲಿಕ್ ರನ್ನು ಪೊಲೀಸರು ಬಂಧಿಸಿದ್ದಾರೆ.
 
ಈ ಕುರಿತು ಮಾತನಾಡಿರುವ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಗಲಭೆ ಹುಟ್ಟು ಹಾಕುತ್ತಿವೆ. ಬಂಗಾಲದ ಜನರು ಸುಳ್ಳು  ಪೋಟೋಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ. 17 ವರ್ಷದ ಯುವಕನೊಬ್ಬ ಪ್ರವಾದಿ ಮಹಮದ್‌ ಪೈಗಂಬರ್‌ ಕುರಿತಾಗಿ ಅವಹೇಳನಕಾರಿ ಪೋಸ್ಟ್‌ ಮಾಡಿದ ಬಳಿಕ ಬದುರಿಯಾ ಮತ್ತು ಬಸಿರ್ಹಾಟ್‌ನಲ್ಲಿ ಹಿಂಸೆ ಭುಗಿಲೆದ್ದಿದ್ದು, ಸಧ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಮ್ಡದಂತಿದೆ.
 

ವೆಬ್ದುನಿಯಾವನ್ನು ಓದಿ