ಅಪರಾಧಕ್ಕೆ ಶಿಕ್ಷೆ ನೀಡಲು ನ್ಯಾಯಾಲವಿದೆ. ಆದರೆ ಅವರಿಗೆ ಸಂಬಂಧಿಸಿದ ಕಟ್ಟಡಗಳನ್ನು ನಿರಂಕುಶವಾಗಿ ಅಧಿಕಾರಿಗಳು ಧ್ವಂಸ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಆರೋಪಿ ಎಂಬ ಮಾತ್ರಕ್ಕೆ ಕಟ್ಟಡ ಕೆಡವಿದರೆ ಅಪರಾಧವಾಗುತ್ತದೆ. ಮನೆ ಅಥವಾ ಕಟ್ಟಡ ಕೆಡವಿದರೆ ಪರಿಹಾರ ನೀಡಬೇಕು. ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕುಟುಂಬಕ್ಕೆ ಶಿಕ್ಷೆ ಕೊಡುವುದು ನ್ಯಾಯಸಮ್ಮತವಲ್ಲ. ನಿಯಮಬಾಹಿರವಾಗಿದ್ದರೆ ನೋಟಿಸ್ ನೀಡಬೇಕು. ಅಂಚೆ ಮೂಲಕ ನೋಟಿಸ್ ತಲುಪಬೇಕು. ನೋಟಿಸ್ ನೀಡಿ 15 ದಿನ ಕಾದ ಬಳಿಕ ಕ್ರಮ ಕೈಗೊಳ್ಳಬೇಕು. ನೋಟಿಸ್ ನೀಡಿದ್ದರೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಕ್ರಮ ಕಟ್ಟಡವಾಗಿದ್ದರೆ ತೆರವುಗೊಳಿಸಲು ಆರೋಪಿಗಳಿಗೆ ಸಮಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.