ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷಗಳ ಅಭ್ಯರ್ಥಿ ಫೈನಲ್?

ಗುರುವಾರ, 22 ಜೂನ್ 2017 (10:24 IST)
ನವದೆಹಲಿ: ರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್ ಡಿಎ ಮೈತ್ರಿ ಕೂಟ ದಲಿತ ಮುಖಂಡ ರಮಾನಾಥ್ ಕೋವಿಂದ್ ರನ್ನು ಕಣಕ್ಕಿಳಿಸಿದೆ. ಇದೀಗ ವಿರೋಧ ಪಕ್ಷಗಳ ಸರದಿ.

 
ಇಂದು ವಿಪಕ್ಷಗಳು ಸಭೆ ಸೇರುತ್ತಿದ್ದುಅಭ್ಯರ್ಥಿಯ ಹೆಸರು ಬಹಿಂರಗಗೊಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ನಿನ್ನೆ ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರನ್ನು ಭೇಟಿ ಮಾಡಿದ್ದು ಅವರನ್ನೇ ಅಭ್ಯರ್ಥಿಯಾಗಿಸುವ ಇರಾದೆ ಪಕ್ಷಕ್ಕಿದೆ ಎಂಬ ಸುದ್ದಿ ದಟ್ಟವಾಗಿದೆ.

ಮೀರಾ ಕುಮಾರ್ ಕೂಡಾ ದಲಿತ ನಾಯಕಿ. ಹೀಗಾಗಿ ಎನ್ ಡಿಎ ಅಭ್ಯರ್ಥಿಗೆ ತಕ್ಕ ಪೈಪೋಟಿ ನೀಡಬಹುದು ಎಂಬ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ. ಏನೇ ಆದರೂ, ಇಂದು ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ