ಸಾಕು ನಾಯಿಗೆ 7 ಲಕ್ಷ ವೆಚ್ಚ ಬರ್ತ್ ಡೇ ಪಾರ್ಟಿ: ಮಾಲಿಕರು ಈಗ ಜೈಲಿಗೆ!
ಅಹಮ್ಮದಾಬಾದ್ ನಲ್ಲಿ ಕುಟುಂಬವೊಂದು ತಮ್ಮ ಪ್ರೀತಿಯ ಎರಡು ಸಾಕು ನಾಯಿಗಳ ಬರ್ತ್ ಡೇ ಪಾರ್ಟಿಯನ್ನು 7 ಲಕ್ಷ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಆಯೋಜಿಸಿತ್ತು. ಅತಿಥಿಗಳನ್ನು ಕರೆದು, ಹಾಡು ಹಾಡಿಸಿ ಭರ್ಜರಿ ಪಾರ್ಟಿಯೇನೋ ಮುಗಿಯಿತು.
ಆದರೆ ಈ ಪಾರ್ಟಿ ಮುಗಿದ ಮೇಲೆ ಮಾಲಿಕರು ಜೈಲಿನ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ. ಕಾರಣ, ಪಾರ್ಟಿಯಲ್ಲಿ ಕೊರೋನಾ ನಿಯಮ ಮುರಿದಿದ್ದಕ್ಕೆ ಶಿಕ್ಷೆಯಾಗಿದೆ. ರಾತ್ರಿ 11 ಗಂಟೆಗೆ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಪಾರ್ಟಿ ಆಯೋಜಿಸಿದ್ದಕ್ಕೆ ಮಾಲಿಕರಿಗೆ ಶಿಕ್ಷೆಯಾಗಿದೆ.