10ನೇ ದಿನವೂ ಪಾಕ್‌ನಿಂದ ಕದನವಿರಾಮ ಉಲ್ಲಂಘನೆ: ಭಾರತ ಸೇನೆಯ ದಿಟ್ಟ ಉತ್ತರ

Sampriya

ಭಾನುವಾರ, 4 ಮೇ 2025 (10:05 IST)
ನವದೆಹಲಿ: ಪೆಹಲ್ಗಾಮ್‌ ಮಾರಣಹೋಮದ ಬಳಿಕ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪಾಕ್‌ ಆಕ್ರಮಿತ ಪ್ರದೇಶದಲ್ಲಿ ಪದೇ ಪದೇ ಪಾಕ್‌ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ.

ಸತತ 10ನೇ ದಿನವೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ. ಎಲ್‌ಒಸಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನಿ ಪಡೆಗಳು ಗಡಿಯಲ್ಲಿ ಹಲವಾರು ಸ್ಥಳಗಳಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿವೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ರಾಜೌರಿ, ಮೆಂಧರ್, ನೌಶೇರಾ, ಸುಂದರ್‌ಬಾನಿ ಮತ್ತು ಅಖ್ನೂರ್ ಎದುರು ಪ್ರದೇಶಗಳಲ್ಲಿ ಎಲ್‌ಒಸಿಯಾದ್ಯಂತ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆದಿರುವುದಾಗಿ ವರದಿಯಾಗಿದೆ.  

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕುಮ್ಮಕ್ಕು ನೀಡಿದ್ದಕ್ಕಾಗಿ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಕ್ರಮಗಳ ಸರಣಿಯನ್ನು ಭಾರತ ಮುಂದುವರಿಸಿದೆ. ಪಾಕಿಸ್ತಾನದಿಂದ ಎಲ್ಲಾ ನೇರ ಮತ್ತು ಪರೋಕ್ಷ ಆಮದುಗಳು, ಒಳಬರುವ ಪಾರ್ಸೆಲ್‌ಗಳನ್ನು ನಿಷೇಧಿಸಿತು. ಪಾಕ್‌ನಿಂದ ಬರುವ ಮತ್ತು ದೇಶದಿಂದ ಹೋಗುವ ಹಡಗುಗಳಿಗೂ ನಿಷೇಧ ವಿಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ