ಸಂತಾಪ ಸೂಚನೆ ಬಳಿಕ ಸಂಸತ್ ಕಲಾಪ ನಾಳೆಗೆ ಮುಂದೂಡಿಕೆ

ಸೋಮವಾರ, 17 ಜುಲೈ 2017 (13:31 IST)
ನವದೆಹಲಿ:ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಬೆಳಗ್ಗೆ 11 ಗಂಟೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೊದಲ ದಿನದ  ಕಲಾಪ ಆರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನಗಳಲ್ಲಿ ಮೃತ ಗಣ್ಯರು ಹಾಗೂ ಇತ್ತೀಚೆಗೆ  ಉಗ್ರರ ದಾಳಿ ಮೃತಪಟ್ಟ ಅಮರ್‌ನಾಥ್‌ ಯಾತ್ರಿಗಳಿಗೆ ಸಂತಾಪ ಸೂಚಿಸಲಾಯಿತು.
 
ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಮರನಾಥ್ ಯಾತ್ರೆ ಮೇಲಿನ ದಾಳಿಯನ್ನು ಒಕ್ಕೋರಲಿನಿಂದ ಖಂಡಿಸಲಾಗಿದ್ದು, ಅಂತೆಯೇ ದಾಳಿ ವೇಳೆ ಮೃತಪಟ್ಟ ಯಾತ್ರಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಅಂತೆಯೇ ಇತ್ತೀಚೆಗೆ ಅಗಲಿದ ಸಂಸತ್ ನ ಮಾಜಿ ಸದಸ್ಯರಿಗೂ ಗೌರವ ಸಲ್ಲಿಕೆ ಮಾಡಿ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.
 
ಆಗಸ್ಟ್ 11ರವರೆಗೂ ಸಂಸತ್ ನ ಉಭಯ ಕಲಾಪಗಳು ನಡೆಯಲಿದ್ದು, ಕಾಶ್ಮೀರ ಹಿಂಸಾಚಾರ, ಡೊಕ್ಲಾಮ್ ವಿವಾದ, ಅಮರನಾಥ್ ಯಾತ್ರೆ ಮೇಲಿನ ದಾಳಿ, ಜಿಎಸ್ ಟಿ ಗೊಂದಲ, ಡಾರ್ಜಲಿಂಗ್ ಹಿಂಸಾಚಾರ ಸೇರಿದಂತೆ ವಿವಿಧ  ವಿಷಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿವೆ. ಇನ್ನು ಕೇಂದ್ರ ಸರ್ಕಾರ ಗ್ರಾಹಕ ರಕ್ಷಣಾ ಮಸೂದೆ, ಜಮ್ಮುಮತ್ತು ಕಾಶ್ಮೀರದಲ್ಲಿ ಜಿಎಸ್ ಟಿ ಜಾರಿ ಕುರಿತ ಮಸೂದೆ  ಸೇರಿದಂತೆ ಒಟ್ಟು 16 ಹೊಸ ಮಸೂದೆಗಳಿಗೆ ಅನುಮೋದನೆ ಪಡೆಯಲು ಕಾರ್ಯತಂತ್ರ ರೂಪಿಸಿದೆ.
 

ವೆಬ್ದುನಿಯಾವನ್ನು ಓದಿ