ಆಮ್ಲಜನಕ ಪೂರೈಕೆ ಕೊರತೆ ಪ್ರಕರಣದ ತನಿಖೆ ಕೋರಿದ್ದ ಪಿಐಎಲ್ ವಜಾ
ಮಂಗಳವಾರ, 5 ಅಕ್ಟೋಬರ್ 2021 (11:13 IST)
ನವದೆಹಲಿ : 'ನೀವು ಹಾಟ್ ಸೀಟಿನಲ್ಲಿ ಇಲ್ಲದಿದ್ದರೆ ಸರ್ಕಾರ ಅಥವಾ ನ್ಯಾಯಾಲಯಗಳನ್ನು ಟೀಕಿಸುವುದು ತುಂಬಾ ಸುಲಭ.
ಆದರೆ ವಿಶ್ವದ ಕೆಲವು ಮುಂದುವರಿದ ರಾಷ್ಟ್ರಗಳು ಕೂಡ ಕೋವಿಡ್ -19 ಸಾಂಕ್ರಾಮಿಕ ರೋಗದ ವೇಳೆ ಕಷ್ಟಗಳನ್ನು ಎದುರಿಸಬೇಕಾಯಿತು' ಎಂದು ಸುಪ್ರೀಂ ಕೋರ್ಟ್, ಎರಡನೇ ಅಲೆಯ ವೇಳೆ ಆಮ್ಲಜನಕದ ಪೂರೈಕೆ ಕೊರತೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದ ಅರ್ಜಿದಾರರಿಗೆ ಸೋಮವಾರ ಹೇಳಿದೆ.
ಈ ವರ್ಷದ ಮಾರ್ಚ್ನಿಂದ ಮೇ ವರೆಗೆ ಕೊರೊನಾ ಎರಡನೇ ಅಲೆಯ ವೇಳೆ ಕೋವಿಡ್ -19 ರೋಗಿಗಳಿಗೆ ಆಮ್ಲಜನಕ ಪೂರೈಸದಿರುವುದು ಮತ್ತು ಆಮ್ಲಜನಕದ ಅಲಭ್ಯತೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಅಥವಾ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ಸ್ಥಾಪಿಸಬೇಕು ಎಂದು ಕೋರಿರುವ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.