PM ಕಿಸಾನ್ ಸಮ್ಮಾನ್ ನಿಧಿ ಹಣ ಬರಬೇಕೆಂದರೆ ಈ ಒಂದು ಕೆಲಸ ಮಾಡಬೇಕು

Krishnaveni K

ಶುಕ್ರವಾರ, 6 ಡಿಸೆಂಬರ್ 2024 (09:18 IST)
ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 19 ನೇ ಕಂತಿನ ಹಣ ಖಾತೆಗೆ ಬರಬೇಕು ಎಂದರೆ ಈ ಒಂದು ಕೆಲಸ ಮಾಡಲು ಸರ್ಕಾರ ಸೂಚನೆ ನೀಡಿದೆ. ರೈತರು ಕೆಲವೊಂದು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.

ಇನ್ನು ಮುಂದೆ ರೈತ ನೋಂದಣಿಯಲ್ಲಿ ನೊಂದಾಯಿಸಿಕೊಂಡ ರೈತರಿಗೆ ಮಾತ್ರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಸಿಗಲಿದೆ. ಮುಂದಿನ ವರ್ಷ ಅಂದರೆ ಜನವರಿ 1 ರಿಂದ ರೈತ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಇಲ್ಲದೇ ಹೋದರೆ ಕಿಸಾನ್ ನಿಧಿ ಹಣ ಬರಲ್ಲ.

ರೈತರಿಗೆ ಕೇಂದ್ರದ ಮೋದಿ ಸರ್ಕಾರವು ಪ್ರತಿ ವರ್ಷ ರೂ.6000 ರಷ್ಟು ಹಣವನ್ನು ಮೂರು ಕಂತುಗಳಲ್ಲಾಗಿ ನೇರವಾಗಿ ಖಾತೆಗೆ ಜಮೆ ಮಾಡುತ್ತದೆ. ಈಗಾಗಲೇ 18 ಕಂತುಗಳ ಹಣ ಬಿಡುಗಡೆಯಾಗಿದೆ. ಇದೀಗ 19 ನೇ ಕಂತಿನ ಹಣ ಬಿಡುಗಡೆಯಾಗಬೇಕಿದೆ.ಇದಕ್ಕೆ ಮೊದಲು ಫಲಾನುಭವಿ ರೈತರು ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.

ನೋಂದಣಿ ಮಾಡುವುದು ಹೇಗೆ?
pmkisan.gov.in ಎಂಬ ವೆಬ್ ಸೈಟ್ ಗೆ ಹೋಗಿ ಕೆಳಗೆ ಸ್ಕ್ರಾಲ್ ಮಾಡಿದರೆ ಫಲಾನುಭವಿಗಳ ಪಟ್ಟಿ ಆಯ್ಕೆ ಸಿಗುತ್ತದೆ. ಇದನ್ನು ಕ್ಲಿಕ್ ಮಾಡಿ ನಿಮ್ಮ ಎಲ್ಲಾ ಮಾಹಿತಿಯನ್ನು ನೀಡಿ. ಎಲ್ಲಾ ಮಾಹಿತಿ ನೀಡಿದ ಬಳಿಕ ಗೆಟ್ ರಿಪೋರ್ಟ್ ಎನ್ನುವ ಬಟನ್ ಕ್ಲಿಕ್ ಮಾಡಿ. ಈಗ ಫಲಾನುಭವಿಗಳ ಪಟ್ಟಿ ನಿಮ್ಮ ಮುಂದೆ ತೆರೆಯುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ 19 ನೇ ಕಂತಿಗೆ ಅರ್ಹರಾಗಿರುತ್ತೀರಿ.

ಒಂದು ವೇಳೆ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳದೇ ಇದ್ದರೆ ತಕ್ಷಣವೇ ಹೆಸರು ನೊಂದಾಯಿಸಿಕೊಂಡು ಯೋಜನೆಯ ಲಾಭ ಪಡೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ