ಪ್ರಧಾನಿ ಮೋದಿಗೆ ಇಂದು ಜನ್ಮದಿನದ ಸಂಭ್ರಮ

ಮಂಗಳವಾರ, 17 ಸೆಪ್ಟಂಬರ್ 2019 (09:35 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 69 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂದು ತವರಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಬಳಿಕ ತಮ್ಮ ತಾಯಿ ಬಳಿ ಆಶೀರ್ವಾದ ಪಡೆಯಲಿದ್ದಾರೆ.


ಗುಜರಾತ್ ನ ಸರ್ದಾರ್ ಸರೋವರ್ ಡ್ಯಾಮ್ ಗೆ ಭೇಟಿ ನೀಡಲಿರುವ ಮೋದಿ ‘ನಮಾಮಿ ನರ್ಮದೆ ಮಹೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ.

ಇದಾದ ಬಳಿಕ ತಮ್ಮ ನಿವಾಸಕ್ಕೆ ತೆರಳಿ ತಾಯಿ ಬಳಿ ಆಶೀರ್ವಾದ ಪಡೆಯಲಿದ್ದಾರೆ. ಪ್ರತೀ ವರ್ಷವೂ ಮೋದಿ ತಮ್ಮ ಜನ್ಮದಿನದಂದು ತಾಯಿಯ ಆಶೀರ್ವಾದ ಪಡೆಯುವುದನ್ನು ತಪ್ಪಿಸಿಕೊಳ್ಳುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ