ಧರ್ಮದೇಟು ಕೊಟ್ಟಾರೆಂದ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಗುದ್ದು
ಬಳಿಕ ರಾಹುಲ್ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ ‘ನನಗೆ ಇನ್ನು ಆರು ತಿಂಗಳಲ್ಲಿ ಏಟು ಬೀಳೋದು ಗ್ಯಾರಂಟಿ ಎಂದು ಒಬ್ಬ ಕಾಂಗ್ರೆಸ್ ನಾಯಕ ಹೇಳಿದ್ದಾರೆ. ನಾನು ಈಗ ಅದಕ್ಕಾಗಿ ಪ್ರತಿನಿತ್ಯ ಸ್ವಲ್ಪ ಹೆಚ್ಚು ಸೂರ್ಯ ನಮಸ್ಕಾರ ಮಾಡುತ್ತೇನೆ. ಯಾಕೆಂದರೆ ಇಂತಹ ಏಟುಗಳನ್ನು ತಡೆದುಕೊಳ್ಳಲು ಶಕ್ತಿ ಬೇಕಲ್ಲಾ? ಕಳೆದ 20 ವರ್ಷದಿಂದ ಸಾಕಷ್ಟು ಟೀಕೆ-ಟಿಪ್ಪಣಿ ಕೇಳಿ ಅಭ್ಯಾಸವಾಗಿದೆ’ ಎಂದು ತಿರುಗೇಟು ನೀಡಿದ್ದಾರೆ.