ಕ್ರಾಂತಿವೀರ ಭಗತ್ ಸಿಂಗ್ ಜನ್ಮದಿನ: ಮೋದಿ ಗೌರವಾರ್ಪಣೆ

ಬುಧವಾರ, 28 ಸೆಪ್ಟಂಬರ್ 2016 (12:23 IST)
ಇಂದು ಕ್ರಾಂತಿಕಾರಿ, ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 109ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ದೇಶಕ್ಕಾಗಿ ಬಲಿದಾನಗೈದ ವೀರಯೋಧನಿಗೆ ಪ್ರಧಾನಿ ಮೋದಿ ಗೌರವ ವಂದನೆ ಸಲ್ಲಿಸಿದ್ದಾರೆ. 

"ವೀರಪುತ್ರ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನವಾದ ಇಂದು ಅವರಿಗೆ ನನ್ನ ಪ್ರಣಾಮಗಳು. ತಮ್ಮ ದಿಟ್ಟತನದಿಂದಾಗಿ ಭಾರತದ ಇತಿಹಾಸದಲ್ಲಿ ಅವರು ಒಂದು ಅಳಿಸಲಾರದ ಛಾಪನ್ನು ಮೂಡಿಸಿ ಹೋಗಿದ್ದಾರೆ", ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
 
ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ, ಭಗತ್ ಸಿಂಗ್, ಪಂಜಾಬ್ ಪ್ರಾಂತ್ಯದ (ಈಗ ಪಾಕಿಸ್ತಾನದಲ್ಲಿದೆ) ಫೈಸಲಾಬಾದ್ ಜಿಲ್ಲೆಯ (ಹಿಂದೆ ಲಯಲಪುರ್ ಕರೆಯಲಾಗುತ್ತಿತ್ತು) ಬಂಗಾ ಹಳ್ಳಿಯಲ್ಲಿ 1907 ರಲ್ಲಿ ಜನಿಸಿದ್ದರು.
 
ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಅವರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. 
 
23ನೇ ವಯಸ್ಸಿನಲ್ಲಿ ಇತರ ಕ್ರಾಂತಿಕಾರಿಗಳಾದ ಶಿವರಾಮ್ ಹರಿ ರಾಜಗುರು ಮತ್ತು ಸುಖದೇವ್ ಜತೆಯಲ್ಲಿ ಮಾರ್ಚ್ 23, 1931ರಂದು ಅವರನ್ನು ಲಾಹೋರ್ ಜೈಲಿನಲ್ಲಿ ನೇಣಿಗೇರಿಸಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ