ಕೇದರಾನಾಥ, ಬದರೀನಾಥ ದೇವಾಲಯಗಳಿಗೆ ಹೊಸ ರೂಪ ನೀಡಲಿರುವ ಕೇಂದ್ರ

ಗುರುವಾರ, 11 ಜೂನ್ 2020 (09:19 IST)
ಉತ್ತರಾಖಂಡ: ದೇಶದ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಕೇದಾರನಾಥ ಮತ್ತು ಬದರೀನಾಥ ದೇವಾಲಯವನ್ನು ನವೀಕರಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಮುಂದಾಗಿದೆ.

 

ಪ್ರಧಾನಿ ಮೋದಿ ಈ ಬಗ್ಗೆ ಖುದ್ದು ಆಸಕ್ತಿ ವಹಿಸಿದ್ದು ಉತ್ತರಾಂಖಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಜತೆ ಚರ್ಚಿಸಿದ್ದಾರೆ. ಇವೆರಡೂ ಪುಣ್ಯ ಭೂಮಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತಹ, ಪರಿಸರ ಸ್ನೇಹಿ ವ್ಯವಸ್ಥೆಗಳಿಗೆ ಆದ್ಯತೆ ಕೊಡಲು ಪ್ರಧಾನಿ ಈಗಾಗಲೇ ಸೂಚನೆ ನೀಡಿದ್ದಾರೆ.

ಪ್ರವಾಸೋದ್ಯಮವನ್ನು ಆಕರ್ಷಿಸುವಂತಹ, ಹೆರಿಟೇಜ್ ಕೇಂದ್ರ, ಉದ್ಯಾನವನ ಸ್ಥಾಪಿಸುವ ಯೋಜನೆ ಸರ್ಕಾರಕ್ಕಿದೆ. ಈ ಮೂಲಕ ದೇವಾಲಯಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಿಸುವುದು ಮತ್ತು ಪ್ರವಾಸೋದ್ಯಮವನ್ನು ಬೆಳೆಸಲು ತಕ್ಕ ವ್ಯವಸ್ಥೆ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ