ಪ್ರಧಾನಿ ಮೋದಿ ದೋಸ್ತಿಗೆ ದೋಸ್ತಿ ದುಷ್ಮನ್ ಗೆ ದುಷ್ಮನ್-ಪ್ರಧಾನಿ ಮೋದಿಯನ್ನು ಹೊಗಳಿದ ಸಚಿವ
ಸೋಮವಾರ, 1 ಜೂನ್ 2020 (10:57 IST)
ಶಿವಮೊಗ್ಗ: ಪ್ರಧಾನಿ ಮೋದಿ ದೋಸ್ತಿಗೆ ದೋಸ್ತಿ ದುಷ್ಮನ್ ಗೆ ದುಷ್ಮನ್ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವದಲ್ಲಿನ ಹಲವು ನಾಯರು ಪ್ರಧಾನಿ ಮೋದಿ ಜತೆ ಗೆಳೆತನಕ್ಕೆ ಮುಂದಾಗಿದ್ದಾರೆ. ಮೋದಿಯನ್ನು ಟೀಕೆ ಮಾಡುವವರು ಬೆರಳೆಣಿಕೆಯಷ್ಟು. ನರೇಂದ್ರ ಮೋದಿ ಈ ದೇಶದ ರಕ್ಷಕ. ಮೋದಿ ಸರ್ಕಾರದಲ್ಲಿ ಒಂದೇ ಒಂದು ಹಗರಣ ನಡೆದಿಲ್ಲ ಎಂದು ಹಾಡಿ ಹೊಗಳಿದ್ದಾರೆ.