ಯೋಧರ ಜೊತೆಗೆ ಪ್ರಧಾನಿ ಮೋದಿ ದೀಪಾವಳಿ
ಪ್ರತೀ ವರ್ಷ ಪ್ರಧಾನಿ ಮೋದಿ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸುತ್ತಾರೆ. ಅದೇ ರೀತಿ ಈ ವರ್ಷವೂ ಯೋಧರಿಗೆ ಸಿಹಿ ಹಂಚಿ ಹಬ್ಬ ಆಚರಿಸಲಿದ್ದಾರೆ.
ಗಡಿ ಕಾಯುವ ಯೋಧರಿಗೆ ಸಿಹಿ, ಉಡುಗೊರೆಗಳನ್ನು ನೀಡಲಿದ್ದಾರೆ. 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಮೋದಿ ಯೋಧರೊಂದಿಗೆ ಈ ವಿಶೇಷ ಕ್ಷಣ ಹಂಚಿಕೊಳ್ಳುತ್ತಿದ್ದಾರೆ.