ದೀಪಾವಳಿ ಹಬ್ಬದಲ್ಲಿ ಕಾಜು ಕಟ್ಲಿ ತಿನ್ನುವುದರ ವಿಶೇಷತೆ ತಿಳಿಯಿರಿ

ಬುಧವಾರ, 3 ನವೆಂಬರ್ 2021 (16:47 IST)
ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಯಾರು ಮಾಡುವ ವಿಶೇಷ ಬಗೆಯ ಹಲವಾರು ಸಿಹಿ ಪದಾರ್ಥಗಳಲ್ಲಿ ಕಾಜು ಕಟ್ಲಿ ಕೂಡ ಒಂದು.
ಇದು ಒಂದು ಸಿಹಿ ಪದಾರ್ಥ ಆಗಿದ್ದರೂ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.
ಇದಕ್ಕೆ ಅದರಲ್ಲಿ ಬಳಕೆ ಮಾಡಿರುವ ಕೆಲವೊಂದು ಆಹಾರದ ಉತ್ಪನ್ನಗಳು ಕಾರಣವಾಗುತ್ತವೆ. ಈ ಸಿಹಿ ಪದಾರ್ಥದಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ನೋಡುವುದಾದರೆ......
ರಕ್ತದ ಒತ್ತಡ ನಿಯಂತ್ರಣವಾಗುತ್ತದೆ
ಗೋಡಂಬಿ ಬೀಜಗಳನ್ನು ಹಾಕಿ ತಯಾರು ಮಾಡಿದ ಕಾಜು ಕಟ್ಲಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಸೋಡಿಯಂ ಅಂಶದ ಪ್ರಮಾಣ ತಗ್ಗುತ್ತದೆ. ಏಕೆಂದರೆ ಇದರಲ್ಲಿ ಪೊಟಾಷ್ಯಿಯಂ ಅಂಶ ಹೆಚ್ಚಾಗಿ ಸಿಗುವುದರಿಂದ ರಕ್ತದ ಒತ್ತಡ ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕೊಲೆಸ್ಟ್ರಾಲ್ ಕಡಿಮೆ
ನಾವು ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಕಂಡುಬರುವ ಅತಿಯಾದ ಕೊಲೆಸ್ಟ್ರಾಲ್ ಅಂಶ ನಮ್ಮ ಹೃದಯಕ್ಕೆ ತೊಂದರೆಗೆ ಕಾರಣವಾಗುತ್ತದೆ. ಆದರೆ ಗೋಡಂಬಿ ಬೀಜಗಳಿಂದ ತಯಾರು ಮಾಡಿದ ಕಾಜು ಕಟ್ಲಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಣೆ ಮಾಡುತ್ತದೆ.
ಮಿತವಾಗಿ ಗೋಡಂಬಿ ಬೀಜಗಳಿಂದ ತಯಾರು ಮಾಡಿದ ಕಾಜು ಕಟ್ಲಿ ಸೇವನೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಶಿಯಂ ಅಂಶ ಸಿಗುತ್ತದೆ. ಇದು ಮಧುಮೇಹ ಸಮಸ್ಯೆಯ ಸಾಧ್ಯತೆಯನ್ನು ತಪ್ಪಿಸುತ್ತದೆ.
 ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಕಾಜು ಕಟ್ಲಿ ಒಮೆಗ 3 ಫ್ಯಾಟಿ ಆಸಿಡ್ ಅಂಶಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ದೇಹದ ರಕ್ತ ಸಂಚಾರದಲ್ಲಿ ಟ್ರೈಗ್ಲಿಸರೈಡ್ ಅಂಶಗಳ ಪ್ರಮಾಣ ಇದರ ಸೇವನೆಯಿಂದ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೃದಯದ ಆರೋಗ್ಯ ಅಭಿವೃದ್ಧಿಯಾಗುತ್ತದೆ ಮತ್ತು ಹೃದಯಕ್ಕೆ ತನ್ನ ಕಾರ್ಯ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ