ಟ್ರಾಫಿಕ್ ನಿಯಂತ್ರಿಸಲು ಈ ಪೊಲೀಸ್ ಅಧಿಕಾರಿ ರಸ್ತೆ ಮಧ್ಯದಲ್ಲೇ ನೃತ್ಯ ಮಾಡ್ತಾರೆ! (ವಿಡಿಯೋ)

ಶನಿವಾರ, 30 ಡಿಸೆಂಬರ್ 2017 (08:02 IST)
ನವದೆಹಲಿ: ಟ್ರಾಫಿಕ್ ಪೊಲೀಸರ ಕೆಲಸವೆಂದರೆ ಅಷ್ಟು ಸುಲಭವಲ್ಲ. ಉರಿ ಬಿಸಿಲಿನಲ್ಲಿ ನಿಂತು, ನಾಲ್ಕೂ ಕಡೆ ಗಮನ ಕೊಡುತ್ತಾ ವಾಹನಗಳಿಗೆ ಸರಿಯಾಗಿ ನಿರ್ದೇಶನ ಕೊಡುವ ಪೊಲೀಸರಿಗೆ ನಿಜಕ್ಕೂ ಒಂದು ಸೆಲ್ಯೂಟ್ ನೀಡಲೇಬೇಕು.
 

ಆದರೆ ಇಲ್ಲೊಬ್ಬ ಅಧಿಕಾರಿ ಟ್ರಾಫಿಕ್ ನಿಯಂತ್ರಿಸುವ ಪರಿ ನೋಡಲೆಂದೇ ವಾಹನ ಸವಾರರು ಕಾದಿರುತ್ತಾರೆ! ಇಂಧೋರ್ ನ ಬ್ಯುಸಿ ರಸ್ತೆ ಮಧ್ಯೆ ನಿಂತು ರಣಜಿತ್ ಸಿಂಗ್ ಎಂಬ ಟ್ರಾಫಿಕ್ ಪೊಲೀಸ್ yಅಧಿಕಾರಿ ವಾಹನಗಳಿಗೆ ನಿರ್ದೇಶನ ನೀಡುವ ಸ್ಟೈಲೇ ವಿಚಿತ್ರ. ರಸ್ತೆ ಮಧ್ಯೆ ನಿಂತು ಪಕ್ಕಾ ಮೈಕಲ್ ಜಾಕ್ಸನ್ ರೀತಿಯಲ್ಲಿ ಮೂನ್ ವಾಕ್ ಮಾಡಿಕೊಂಡು ಇವರು ಟ್ರಾಫಿಕ್ ನಿಯಂತ್ರಿಸುತ್ತಿದ್ದರೆ ವಾಹನ ಸವಾರರು ಸಿಗ್ನಲ್ ಎನ್ನುವುದನ್ನೂ ಮರೆತು ಅರೆಕ್ಷಣ ನೋಡುತ್ತಿರುತ್ತಾರೆ. ಅದು ಹೇಗಿರುತ್ತೆ ಎಂದು ತಿಳಿಯಬೇಕಾದರೆ ಈ ವಿಡಿಯೋ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ