ಡೇರಾ ಬಾಬಾನ ಆಶ್ರಮದಲ್ಲಿ ತಡಕಾಡಿದ ಪೊಲೀಸರಿಗೆ ಕಾದಿತ್ತು ಶಾಕ್!

ಮಂಗಳವಾರ, 5 ಸೆಪ್ಟಂಬರ್ 2017 (08:37 IST)
ನವದೆಹಲಿ: ಬಾಬಾ ರಾಮ್ ರಹೀಂ ಸಿಂಗ್ ಬಂಧನದ ನಂತರ  ಡೇರಾ ಸಂಘಟನೆ ಕೇಂದ್ರಕ್ಕೆ ಸರ್ಚಿಂಗ್ ಗೆಂದು ಬಂದ ಪೊಲೀಸರು ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುವಂತಾಗಿದೆ. ಅಂತಹದ್ದೇನಪ್ಪಾ ಅಲ್ಲಿತ್ತು ಎಂದು ನಿಮ್ಮ ಕುತೂಹಲವೇ?

 
ಡೇರಾ ಬಾಬಾನ ಅಕ್ರಮಗಳ ಬಗ್ಗೆ ಹಲವು ವರದಿಗಳನ್ನು ಓದಿದ್ದೇವೆ. ಆದರೆ ಅಲ್ಲಿ ತಡಕಾಡಲು ಹೋದ ಪೊಲೀಸರಿಗೆ ಆಶ್ರಮದೊಳಗೆ ಭಾರೀ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಭಂಡಾರವೇ ಸಿಕ್ಕಿದೆ.

ಡೇರಾ ಬಾಬಾನ ಬಂಧನವಾದ ಕೂಡಲೇ ಆತನ ಆಶ್ರಮದೊಳಗೆ ಕೂಡಿಟ್ಟಿದ್ದ ಸಕ್ರಮ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವುದು ಪೊಲೀಸರ ಗುರಿಯಾಗಿತ್ತು. ಅದರಂತೆ ಒಳಗೆ ಕಾಲಿಟ್ಟ ಪೊಲೀಸರಿಗೆ ಹಲವು ಡಬಲ್ ಮತ್ತು ಸಿಂಗಲ್ ಬ್ಯಾರಲ್ ರೈಫಲ್, 9 ಎಂಎಂ ಪಿಸ್ತೂಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ.. ಊಟಕ್ಕೆ ಮನೆಗೆ ಬನ್ರೀ.. ಎಂದು ಗಂಡನಿಗೆ ಬಹಿರಂಗವಾಗಿ ದಬಾಯಿಸೋದೇ ಕಾಜೋಲ್?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ