ರಾಜಕಾರಣಿಗಳು ಇನ್ನು ಪತ್ನಿಯ ಈ ಸೀಕ್ರೆಟ್ ಬಹಿರಂಗಪಡಿಸಬೇಕು!

ಬುಧವಾರ, 13 ಸೆಪ್ಟಂಬರ್ 2017 (10:08 IST)
ನವದೆಹಲಿ: ರಾಜಕಾರಣಿಗಳು ಚುನಾವಣೆ ಸಮಯ ಬಂದಾಗ ತಮ್ಮ ಆದಾಯ ಘೋಷಿಸಿ ಸುಮ್ಮನಾಗುತ್ತಾರೆ. ಆದರೆ ಪತ್ನಿಯ ಬಗ್ಗೆ ವಿವರಣೆ ನೀಡುವುದಿಲ್ಲ. ಇನ್ನು ಹಾಗೆ ಮಾಡುವಂತಿಲ್ಲ.

 
ಕಾನೂನು ಸಚಿವಾಲಯ ಹೊಸ ಕಾನೂನೊಂದನ್ನು ಹೊರ ತರಲು ಯತ್ನಿಸುತ್ತಿದ್ದು, ಅದು ಜಾರಿಗೆ ಬಂದರೆ ರಾಜಕಾರಣಿಗಳು ತಮ್ಮ ಪತ್ನಿಯ ಆದಾಯ ಮೂಲವನ್ನೂ ಬಹಿರಂಗಪಡಿಸಬೇಕಾಗುತ್ತದೆ.

ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಇನ್ನು ಮುಂದೆ ರಾಜಕಾರಣಿಗಳು ತಮ್ಮ ಆದಾಯದ ಮೂಲ ಮಾತ್ರವಲ್ಲದೆ, ಪತ್ನಿಯ ಆದಾಯದ ಮೂಲದ ವಿವರಗಳನ್ನೂ ಸಲ್ಲಿಸಬೇಕು. ಪತ್ನಿ ಹೆಸರಲ್ಲಿ ರಾಜಕಾರಣಿಗಳು ಭಾರೀ ಪ್ರಮಾಣದ ಆದಾಯ ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ ಸುಪ್ರೀಂ ಕೋರ್ಟ್ ಗೆ ಇಂತಹದ್ದೊಂದು ಪ್ರಸ್ತಾಪ ಮುಂದಿಟ್ಟಿದೆ. ಈ ಬಗ್ಗೆ ಚುನಾವಣಾ ಆಯೋಗದ ಜತೆಗೂ ಮಾತುಕತೆ ನಡೆಸಲಾಗುತ್ತಿದೆಯಂತೆ. ಚುನಾವಣಾ ಆಯೋಗ ಕಾನೂನು ಸಚಿವಾಲಯದ ಮೊರೆ ಹೋಗಿದೆ.

ಇದನ್ನೂ ಓದಿ.. ಗೌರಿ ಲಂಕೇಶ್, ಕುಲಬರ್ಗಿ ಹಂತಕರ ಬಗ್ಗೆ ಪೊಲೀಸರಿಗೆ ಸಿಕ್ಕಿದೆ ಒಂದು ಸುಳಿವು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ