ಬಂಧನ ಭೀತಿಯಲ್ಲಿದ್ದ ಪೂಜಾ ಖೇಡ್ಕರ್‌ಗೆ ಸಿಕ್ಕಿತು ಬಿಗ್‌ ರಿಲೀಫ್

Sampriya

ಸೋಮವಾರ, 12 ಆಗಸ್ಟ್ 2024 (16:53 IST)
Photo Courtesy X
ನವದೆಹಲಿ: ಬಂಧನ ಭೀತಿ ಎದುರಿಸುತ್ತಿರುವ ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ ಅವರಿಗೆ ದೆಹಲಿ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿ ಆದೇಶ ಹೊರಡಿಸಿದೆ.

ಒಬಿಸಿ ಕೋಟಾ ವಂಚನೆ ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ತಪ್ಪಾಗಿ ಪಡೆದ ಪ್ರಕರಣ ಸಂಬಂಧ ಬಂಧನಕ್ಕೆ ಆಗಸ್ಟ್‌ 21ರ ವರೆಗೆ ಅವರನ್ನು ಬಂಧಿಸದಂರೆ ಮಧ್ಯಂತರ ತಡೆ ನೀಡಿದ್ದು, ಈ ಮೂಲಕ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.  

ಇದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ ಪೂಜಾ ಖೇಡ್ಕರ್ ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.

2022 ರ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಸಲ್ಲಿಸಿದ ಅರ್ಜಿಯಲ್ಲಿ 'ತಪ್ಪು ಮಾಹಿತಿ ನೀಡಿದ' ಆರೋಪದ ಮೇಲೆ ದೆಹಲಿಯಲ್ಲಿ ಆಕೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇತ್ತೀಚೆಗೆ, ಕೇಂದ್ರ ಲೋಕಸೇವಾ ಆಯೋಗವು ಜುಲೈ 31 ರಂದು ಪೂಜಾ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿದ್ದು ಮಾತ್ರವಲ್ಲದೇ ಭವಿಷ್ಯದಲ್ಲಿ ಯಾವುದೇ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗದಂತೆ ನಿರ್ಬಂಧ ಹೇರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ