ಹುತಾತ್ಮರ ದಿನವನ್ನು ಶೌರ್ಯ ದಿನವೆಂದು ಆಚರಿಸಿದ ಪೂಜಾ ಶಕುನ್ ಪಾಂಡೆ

ಗುರುವಾರ, 31 ಜನವರಿ 2019 (07:38 IST)
ಆಗ್ರಾ : ಹಿಂದೂ ಮಹಾಸಭಾ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮಹಾತ್ಮ ಗಾಂಧೀಜಿ ಅವರ ಸಾವನ್ನಪ್ಪಿದ ದಿನವನ್ನು ಶೌರ್ಯ ದಿನ ಎಂದು ಆಚರ ಣೆ ಮಾಡಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಅಟಿಕೆ ಗನ್ ಮೂಲಕ ಗುಂಡಿಟ್ಟಿದ್ದು, ಈ ಮೂಲಕ ಗಾಂಧೀಜಿ ಅವರು ಸಾವನ್ನಪ್ಪಿದ ದಿನವನ್ನು ಆಚರಣೆ ಮಾಡಿದ್ದಾರೆ. ಅಲ್ಲದೇ 1948 ಜನವರಿ 30 ರಂದು ಗಾಂಧೀಜಿ ಅವರಿಗೆ ಗುಂಡಿಟ್ಟು ಕೊಂದ ನಾಥೂರಾಮ್ ಗೋಡ್ಸೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಕೂಡ ಮಾಡಿ `ಗೋಡ್ಸೆ ಅಮರ್ ರಹೇ’ ಎಂದು ಘೋಷಣೆ ಕೂಗಿದ್ದಾರೆ.

 

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಾಂಡೆ, ನಾನು ಇಂದು ಹೊಸ ಸಾಂಪ್ರದಾಯಕ್ಕೆ ನಾಂದಿ ಹಾಡಿದ್ದು, ದಸರಾ ದಿನದಂದು ರಾವಣನನ್ನು ಸುಟ್ಟು ಸಂಭ್ರಮ ಪಡುವಂತೆ, ಇಂದು ಕೂಡ ನಡೆಸಲಾಯಿತು ಎಂದು ತಿಳಿಸಿದ್ದಾರೆ. ಅಲ್ಲದೇ ಹಿಂದೂ ಮಹಾಸಭಾ ದೇಶ ವಿಭಜನೆ ಆಗಲು ಗಾಂಧೀಜಿಯೇ ಕಾರಣ ಎಂದು ಆರೋಪಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ