ಸಿದ್ದರಾಮಯ್ಯ ಸಾಹೇಬ್ರಿಗೆ ಭ್ರಷ್ಟಾಚಾರ ಎಂದರೆ ಏನಂತಾನೇ ಗೊತ್ತಿಲ್ಲ: ಪ್ರದೀಪ್ ಈಶ್ವರ್

Krishnaveni K

ಮಂಗಳವಾರ, 23 ಜುಲೈ 2024 (15:15 IST)
ಬೆಂಗಳೂರು: ಇಡಿ ಅಧಿಕಾರಿಗಳು ವಾಲ್ಮೀಕಿ ಹಗರಣದಲ್ಲಿ ಸಿಎಂ ಮತ್ತು ಡಿಸಿಎಂ ಹೆಸರು ಹೇಳಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿದೆ. ಇದರ ನಡುವೆ ಶಾಸಕ ಪ್ರದೀಪ್ ಈಶ್ವರ್ ಸಿದ್ದರಾಮಯ್ಯ ಸಾಹೇಬರಿಗೆ ಭ್ರಷ್ಟಾಚಾರ ಎಂದರೇ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರದೀಪ್ ಈಶ್ವರ್ ‘ವಾಲ್ಮೀಕಿ ಹಗರಣದಲ್ಲಿ ಕಲ್ಲೇಶ್ ಎನ್ನುವ ಅಧಿಕಾರಿಯನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಕರೆಸಿಕೊಂಡು 17 ಪ್ರಶ್ನೆ ಕೇಳುತ್ತಾರೆ. ಉಳಿದ ಮೂರು ಪ್ರಶ್ನೆಗಳಿಗೆ ನಾನು ದಾಖಲೆ ಪರಿಶೀಲಿಸಿ ಉತ್ತರಿಸುವುದಾಗಿ ಹೇಳುತ್ತಾರೆ. ಆಗ ಮನೋಜ್ ಮಿಟ್ಟಲ್ ಎನ್ನುವ ಅಧಿಕಾರಿ ಸಿಎಂ ಮತ್ತು ಡಿಸಿಎಂ ಕೈವಾಡವಿದೆ ಎಂದು ಅವರ ಹೆಸರು ಹೇಳದೇ ಇದ್ದರೆ ನಿಮಗೆ ಬೇಲ್ ಸಿಗದ ಹಾಗೆ ಮಾಡಿ ಎರಡು ವರ್ಷ ಜೈಲಿಗೆ ಹಾಕಿಸ್ತೀವಿ ಎಂದು ಬೆದರಿಕೆ ಹಾಕುತ್ತಾರೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡುತ್ತಾರೆ’ ಎಂದು ವಿವರಿಸಿದ್ದಾರೆ.

‘ಕೇಂದ್ರ ಬಿಜೆಪಿ ನಾಯಕರಿಗೆ ನಾನು ಕೇಳಲು ಬಯಸುತ್ತೇನೆ. ಅವರಿಗೆ 15 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರಂತಹ ಅಹಿಂದ ನಾಯಕ ಮುಖ್ಯಮಂತ್ರಿಯಾಗಿರುವುದು ಇಷ್ಟವಿಲ್ಲವಾ? ಅವರಂತಹ ಧೀಮಂತ ನಾಯಕ ಇನ್ನೊಬ್ಬರು ಯಾರು ಇದ್ದಾರೆ ಹೇಳಿ. ಬಿಜೆಪಿ ಕೇಂದ್ರ ನಾಯಕರು ಏನೇ ಮಾಡಿದರೂ ಸಿದ್ದರಾಮಯ್ಯ ಸಾಹೇಬರ ಕೂದಲೂ ಕಿತ್ಕೊಳ್ಳಕ್ಕಾಗಲ್ಲ’ ಎಂದಿದ್ದಾರೆ.

ಅಷ್ಟೇ ಅಲ್ಲದೆ, ‘ಸಿದ್ದರಾಮಯ್ಯ ಸಾಹೇಬರಿಗೆ ಭ್ರಷ್ಟಾಚಾರ ಎಂದರೆ ಏನು ಅಂತಾನೇ ಗೊತ್ತಿಲ್ಲ. ಅಂತಹವರ ಮೇಲೆ ಷಡ್ಯಂತ್ರ ಮಾಡಿ ಈ ಕೇಸ್ ನಲ್ಲಿ ಸಿಲುಕಿಸಲು ಪ್ರಯತ್ನ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ