ಅಬಾರ್ಷನ್ ಗುಳಿಗೆ ಸೇವಿಸಿ ಅಪ್ರಾಪ್ತ ಗರ್ಭಿಣಿ ಸಾವು
15 ವರ್ಷದ ಯುವತಿ ಸಾವನ್ನಪ್ಪಿದ್ದಾಕೆ. ಇದೀಗ ಬಾಯ್ ಫ್ರೆಂಡ್ ಅರೆಸ್ಟ್ ಮಾಡಲಾಗಿದ್ದು, ಇವರಿಗೆ ಗುಳಿಗೆ ಸರಬರಾಜು ಮಾಡಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
27 ವರ್ಷದ ಬಾಯ್ ಫ್ರೆಂಡ್ ಪ್ರತಿನಿತ್ಯ ಬಾಲಕಿಯನ್ನು ಶಾಲೆಗೆ ಡ್ರಾಪ್ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಇದೇ ಸಲುಗೆಯಿಂದ ಬಾಲಕಿ ಜೊತೆಗೆ ಬಾಯ್ ಫ್ರೆಂಡ್ ಲೈಂಗಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು. ಆಕೆ ಗರ್ಭಿಣಿ ಎಂಬ ವಿಚಾರ ತಿಳಿದ ಬಳಿಕ ಗಾಬರಿಯಾದ ಬಾಯ್ ಫ್ರೆಂಡ್ ತನ್ನ ಸ್ನೇಹಿತನ ಸಹಾಯದೊಂದಿಗೆ ನಕಲಿ ವೈದ್ಯನಿಂದ ಗರ್ಭಪಾತ ಮಾಡಿಸಲು ಔಷಧಿ ಪಡೆದಿದ್ದ. ಇದನ್ನು ಸೇವಿಸಿದ ಬಾಲಕಿ ಸಾವನ್ನಪ್ಪಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.