ಸಂಸತ್ತಿನಲ್ಲಿ ಅಂಗೀಕಾರ ಬೆನ್ನಲ್ಲೇ ವಕ್ಫ್‌ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂತಿಮ ಮುದ್ರೆ

Sampriya

ಭಾನುವಾರ, 6 ಏಪ್ರಿಲ್ 2025 (09:35 IST)
Photo Courtesy X
ನವದೆಹಲಿ: ಪಾರ್ಲಿಮೆಂಟ್‌ನಲ್ಲಿ ಸುದೀರ್ಘ ಚರ್ಚೆಗೊಳಗಾಗಿ ಅಂಗೀಕಾರಗೊಂಡ ವಕ್ಫ್‌ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.

ಮುಸ್ಲಿಂ ಲೀಗ್‌, ಯುಪಿಎ ಮೈತ್ರಿಪಕ್ಷಗಳ ಸಂಸದರ ವಿರೊಧದ ನಡುವೆಯೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ರಾತ್ರೋರಾತ್ರಿ ಈ ಮಸೂದೆಗೆ ಅಂಗೀಕಾರ ದೊರಕಿತ್ತು. ಶನಿವಾರ ರಾತ್ರಿ ಮಸೂದೆಗೆ ಮುರ್ಮು ಅವರು ಒಪ್ಪಿಗೆ ನೀಡಿದ್ದು, ಇದು ಈಗ ಕಾಯ್ದೆಯಾಗಿದೆ.
ಇದೇ ವೇಳೆ ರಾಷ್ಟ್ರಪತಿ ಅವರು, ಮುಸಲ್ಮಾನ್ ವಕ್ಫ್ (ಪುನರಾವರ್ತಿತ) ಮಸೂದೆ 2025 ಕ್ಕೆ ಸಹ ಒಪ್ಪಿಗೆ ನೀಡಿದ್ದಾರೆ.

ಲೋಕಸಭೆಯ ಅಂಗೀಕಾರ ಪಡೆದಿರುವ ವಕ್ಫ್‌ (ತಿದ್ದುಪಡಿ) ಮಸೂದೆಗೆ 13 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ ರಾಜ್ಯಸಭೆಯು ಶುಕ್ರವಾರ ನಸುಕಿನ 2.30ಕ್ಕೆ ಅಂಗೀಕಾರ ನೀಡಿತ್ತು. ಮಸೂದೆಯ ಪರವಾಗಿ 128 ಮಂದಿ, ವಿರುದ್ಧವಾಗಿ 95 ಮಂದಿ ಮತ ಚಲಾಯಿಸಿದ್ದರು.

ವಕ್ಫ್‌ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಬಾರದು ಎಂದು ಮುಸ್ಲಿಂ ಲೀಗ್‌ನ ಐವರು ಸಂಸದರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶನಿವಾರ ಒತ್ತಾಯಿಸಿದ್ದರು. ಅಸಾಂವಿಧಾನಿಕವಾದ ಈ ಮಸೂದೆಯು ಜಾರಿಗೆ ಬರುವುದನ್ನು ತಡೆಯಬೇಕು ಎಂದು ಅವರು ಕೋರಿದ್ದರು. ಅದರ ಬೆನ್ನಲ್ಲೇ ರಾಷ್ಟ್ರಪತಿ ಮಸೂದೆಗೆ ಅಂತಿಮ ಮುದ್ರೆ ಒತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ