ತ್ರಿವಳಿ ತಲಾಕ್‌ನಿಂದ ಮುಕ್ತಿ ಪಡೆದ ಮುಸ್ಲಿಂ ಮಹಿಳೆಯರು ಎಂದು ಪ್ರಧಾನಿ ಬಣ್ಣನೆ

ಭಾನುವಾರ, 31 ಡಿಸೆಂಬರ್ 2017 (15:18 IST)
ಲೋಕಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆ ಮಂಡನೆ ಬಗ್ಗೆ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಹಲವು ವರ್ಷಗಳ ಸಂಕಷ್ಟದ ನಂತರ ಮುಸ್ಲಿಂ ಮಹಿಳೆಯರು ಅಂತಿಮವಾಗಿ ಮುಕ್ತಿ ಪಡೆದಿದ್ದಾರೆ ಎಂದು ಬಣ್ಣನೆ ಮಾಡಿದ್ದಾರೆ.
 
ವಿಡಿಯೋ ಕಾನ್ಫರೆನ್ಸ್ ಮೂಲಕ ಕೇರಳದ ವರ್ಕಲಾದ ಶಿವಗಿರಿ ಮಠದಲ್ಲಿ 85ನೆ ಶಿವಗಿರಿ ಯಾತ್ರಾ ಮಹೋತ್ಸವದ ಉದ್ಘಾಟನಾ ಭಾಷಣ ಮಾಡಿದ ಮೋದಿ, ಕಾಳಧನ, ಭ್ರಷ್ಟಾಚಾರ, ಬೇನಾಮಿ ಆಸ್ತಿ ಮತ್ತು ಭಯೋತ್ಪಾದನೆ ನಿಗ್ರಹದ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದಿದ್ದಾರೆ.
 
 
ಹೊಸ ವರ್ಷಕ್ಕೆ ದೇಶವಾಸಿಗಳಿಗೆ ಶುಭ ಕೋರಿದ ಅವರು, 2018ನೆ ವರ್ಷದಲ್ಲಿ ದೇಶದ ಜನರು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದ ಅವರು, ಹೊಸ ವರ್ಷ ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ವರುಷವಾಗಬೇಕು ಎಂದು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ