ಕೊರೊನಾ ಲಸಿಕೆ ಪಡೆಯಲು ಕಾರ್ಯಕರ್ತರು , ಸಂಸದರು ನೆರವಾಗಲು ಪ್ರಧಾನಿ ಮೋದಿ ಸೂಚನೆ

ಬುಧವಾರ, 10 ಮಾರ್ಚ್ 2021 (12:37 IST)
ಬೆಂಗಳೂರು : ಕೊರೊನಾ ಲಸಿಕೆ ಪಡೆಯಲು ಕಾರ್ಯಕರ್ತರು , ಸಂಸದರು ನೆರವಾಗಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ದೇಶದಾದ್ಯಂತ ಕೊರೊನಾ ಲಸಿಕೆ ಬಿಡುಗಡೆಯಾಗಿದ್ದು, ದೇಶದ ಪ್ರತಿಯೊಬ್ಬರು ಇದನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಹಾಗಾಗಿ ಕೊರೊನಾ ಲಸಿಕೆ ಪಡೆಯಲು ಕಾರ್ಯಕರ್ತರು , ಸಂಸದರು ನೆರವಾಗಲು ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಸೂಚಿಸಿದ್ದಾರೆ.

ಈ ಬಗ್ಗೆ ತಿಳಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೊರೊನಾ ಲಸಿಕೆ ಕೇಂದ್ರ ತಲುಪಲು ಸಹಾಯ ಸೇರಿದಂತೆ ಎಲ್ಲ ರೀತಿಯಲ್ಲಿ ಸಹಾಯ ಮಾಡಿ. ಹಾಗೂ ಕೊರೊನಾ ಲಸಿಕೆ ಪಡೆಯಲು ಅರ್ಹರಿಗೆ ಸಹಾಯ ಮಾಡಿ ಎಂದು ಪ್ರಧಾನಿ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ