ಪ್ರಧಾನಿ ಮೋದಿ ಲೋಕಸಭೆಯಲ್ಲಿ ಜೂನ್​​ 20ರಂದು ಬಹುಮತ ಸಾಬೀತು ಸಾಧ್ಯತೆ

Sampriya

ಮಂಗಳವಾರ, 11 ಜೂನ್ 2024 (16:35 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಅ ವರು ಜೂನ್​​ 20ಕ್ಕೆ ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ.

ಈಗಾಗಲೇ ಮೋದಿ ನೇತೃತ್ವದಲ್ಲಿ ಎನ್​​ಡಿಎ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ 72 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸಚಿವರಿಗೆ ಸೋಮವಾರ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಇಂದು ಸಚಿವರು ದೆಹಲಿ ಕಚೇರಿಗೆ ಬಂದು ಅಧಿಕೃತವಾಗಿ ಅಧಿಕಾರ ಸ್ವೀಕಾರಿಸಿದ್ದಾರೆ.

ಹೊಸದಾಗಿ ಆಯ್ಕೆಯಾದ ಎಲ್ಲ ಸಂಸದರು ಜೂನ್ 18 ಮತ್ತು 19 ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಜೂನ್ 21 ರಂದು ರಾಷ್ಟ್ರಪತಿ ಭಾಷಣ ಮಾಡುತ್ತಾರೆ. ಪ್ರಧಾನಿ ಮೋದಿ ಅವರು ಜೂನ್​​ 20ರಂದು ಅವರು ಬಹುಮತ ಸಾಬೀತು ಪಡಿಸುವ ಸಾಧ್ಯತೆ ಇದೆ. ಒಂದು ಬಾರಿ ತಮ್ಮ ಬಲವನ್ನು ಸಾಬೀತು ಮಾಡಿದ್ರೆ, ಮುಂದಿನ ಆರು ತಿಂಗಳು ಸರ್ಕಾರ ಭದ್ರವಾಗಿರುತ್ತದೆ.

ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ ಹೇಳಿಕೊಳ್ಳುವಷ್ಟು ದೊಡ್ಡ ಸಾಧನೆ ಮಾಡಿಲ್ಲ. 240 ಸ್ಥಾನಗಳನ್ನು ಪಡೆದುಕೊಂಡು ತೃಪ್ತಿಪಟ್ಟಿದೆ. ಆದರೆ ಎನ್​​ಡಿಎ ಮೈತ್ರಿಕೂಟ ಒಟ್ಟು ಹೆಚ್ಚು ಸ್ಥಾನ ಪಡೆದಿದೆ.

ಸರ್ಕಾರ ರಚನೆಗೆ 36 ಸ್ಥಾನಗಳು ಅಗತ್ಯ ಇದ್ದ ಕಾರಣ ಬಿಜೆಪಿಯು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ಬಿಹಾರ್​​​​ ಮುಖ್ಯಮಂತ್ರಿ ನೀತಿಶ್​​​ ಕುಮಾರ್​​ ಅವರ ಜೆಡಿಯು ಪಕ್ಷದ ಬೆಂಬಲ ಪಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ