ನವದೆಹಲಿ : ಕೊರೊನಾ ಲಸಿಕೆ ತಯಾರಿಕಾ ಲ್ಯಾಬ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿದ್ದಾರೆ.
ಅಹಮದಾಬಾದ್ ನ ಜೈಡಸ್ ಬಯೋಟೆಕ್ ಪಾರ್ಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಕೊರೊನಾ ಲಸಿಕೆ ಕುರಿತು ಮಾಹಿತಿ ಸಂಗ್ರಹ ಮಾಢಲಿದ್ದಾರೆ. ಲಸಿಕೆ ಸಿದ್ಧತೆ , ಹಂಚಿಕೆ ಕುರಿತು ಪ್ರಧಾನಿ ಮೋದಿ ವಿಜ್ಞಾನಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.