ರೂರ್ಕೆಲಾದಲ್ಲಿ ರಾಹುಲ್ ಗಾಂಧಿ ಪೂಜೆ, ನಾಮ ಚಿಕ್ಕದಾಗಿರಲಿ ಎಂದಿದ್ದಕ್ಕೆ ಟ್ರೋಲ್

Krishnaveni K

ಬುಧವಾರ, 7 ಫೆಬ್ರವರಿ 2024 (10:17 IST)
Photo Courtesy: Twitter
ಒಡಿಶಾ: ಭಾರತ್ ನ್ಯಾಯ್ ಜೋಡೋ ಯಾತ್ರೆ ವೇಳೆ ನಿನ್ನೆ ನಾಯಿಗೆ ಬಿಸ್ಕಟ್ ನೀಡಿದ ವಿಚಾರಕ್ಕೆ ಟ್ರೋಲ್ ಗೊಳಗಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ದೇವಾಲಯದಲ್ಲಿ ಪೂಜಾರಿಗೆ ನಾಮ ಚಿಕ್ಕದಾಗಿ ಹಾಕಿ ಎಂದು ಹೇಳಿ ಟೀಕೆಗೊಳಗಾಗಿದ್ದಾರೆ.

ಒಡಿಶಾದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ರೂರ್ಕೆಲಾದ ವೇದವ್ಯಾಸ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ದೇವಾಲಯ ಭೇಟಿ ವೇಳೆ ರಾಹುಲ್ ಗಾಂಧಿ ಹಣೆಗೆ ಪೂಜಾರಿ ತಿಲಕವಿಡಲು ಬಂದಾಗ ಚಿಕ್ಕದಾಗಿ ಹಾಕಿ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಹುಲ್ ರನ್ನು ಟೀಕಿಸಿರುವ ಬಿಜೆಪಿ, ದೊಡ್ಡದಾಗಿ ತಿಲಕವಿಟ್ಟರೆ ಯಾರಿಗೆ ಬೇಸರವಾಗುತ್ತದೆಂದು ಚಿಕ್ಕದಾಗಿ ಹಾಕಿ ಎನ್ನುತ್ತಿದ್ದೀರಿ. ದೇವಾಲಯದಲ್ಲೂ ರಾಜಕೀಯ ಬಿಡಲ್ವಾ ಎಂದು ಲೇವಡಿ ಮಾಡಿದೆ.

ರಾಹುಲ್ ಗಾಂಧಿಗೆ ಹೂಮಳೆ ಸ್ವಾಗತ
ಒಡಿಶಾಗೆ ಯಾತ್ರೆ ಬಂದ ರಾಹುಲ್ ಗಾಂಧಿಗೆ ಸ್ಥಳೀಯರು ಹೂಮಳೆ ಸುರಿಸಿ ಸ್ವಾಗತ ಕೋರಿದ್ದಾರೆ. ವಾಹನದಿಂದ ಇಳಿದ ರಾಹುಲ್ ನೇರವಾಗಿ ಜನರ ಬಳಿ ತೆರಳಿದ್ದಾರೆ. ಈ ವೇಳೆ ಅಲ್ಲಿನ ಮಹಿಳೆಯರು ಅವರಿಗೆ ಹೂಮಳೆ ಸುರಿಸಿ ಸ್ವಾಗತ ಕೋರಿದ್ದಾರೆ. ಇಂದು ಬೆಳಿಗ್ಗೆಯೇ ರೂರ್ಕೆಲಾದಲ್ಲಿ ರಾಹುಲ್ ಯಾತ್ರೆ ಆರಂಭವಾಗಿದೆ. ಇದಕ್ಕೆ ಮೊದಲು ಪೂಜೆ ಸಲ್ಲಿಸಿ ಇಂದಿನ ಯಾತ್ರೆ ಆರಂಭಿಸಿದ್ದಾರೆ. ಅವರಿಗೆ ನೂರಾರು ಕಾರ್ಯಕರ್ತರೂ ಸಾಥ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ