ಲೋಕಸಭೆ ಚುನಾವಣೆ ಫಲಿತಾಂಶ ಇಫೆಕ್ಟ್: ರಾಹುಲ್ ಗಾಂಧಿಗೆ ಈಗ ಫ್ಯಾನ್ಸ್ ಜಾಸ್ತಿ

Krishnaveni K

ಭಾನುವಾರ, 9 ಜೂನ್ 2024 (12:18 IST)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸುಧಾರಿತ ಪ್ರದರ್ಶನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿಯ ಫಾಲೋವರ್ ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಇದಕ್ಕೆ ಮೊದಲು ಭಾರತದ ರಾಜಕಾರಣಿಗಳ ಪೈಕಿ ಸೋಷಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿಯೇ ಟಾಪ್ ಲೀಡರ್ ಆಗಿದ್ದರು. ಆದರೆ ಇದೀಗ ಕಳೆದ ಕೆಲವು ಸಮಯದಿಂದ ಮೋದಿ ಯೂ ಟ್ಯೂಬ್, ಇನ್ ಸ್ಟಾಗ್ರಾಂ ಫಾಲೋವರ್ ಗಳ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ ಇಲ್ಲವೇ ಇದ್ದ ಹಾಗೆಯೇ ಇದೆ.

ಆದರೆ ರಾಹುಲ್ ಗಾಂಧಿಗೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹಿಂಬಾಲಕರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕವಂತೂ ರಾಹುಲ್ ಫಾಲೋವರ್ ಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದು ಕಾಂಗ್ರೆಸ್ ನಾಯಕನ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ರಾಹುಲ್ ಗಾಂಧಿಗೆ ಇನ್ ಸ್ಟಾಗ್ರಾಂ, ಯೂ ಟ್ಯೂಬ್, ಟ್ವಿಟರ್ ನಂತಹ ಜನಪ್ರಿಯ ಆಪ್ ಗಳಲ್ಲಿ ಖಾತೆ ಹೊಂದಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಅವರಿಗೆ 10.1 ಮಿಲಿಯನ್ ಫಾಲೋವರ್ ಗಳಿದ್ದಾರೆ. ಟ್ವಿಟರ್ ನಲ್ಲಿ 25.9 ಮಿಲಿಯನ್ ಫಾಲೋವರ್ ಗಳಿದ್ದಾರೆ. ಯೂ ಟ್ಯೂಬ್ ನಲ್ಲಿ 7.58 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ