ನವದೆಹಲಿ: ಈ ಬಾರಿ ಟಿ20 ವಿಶ್ವಕಪ್ ಆರಂಭವಾಗಿದ್ದು ಬಹುಶಃ ಕೆಲವರಿಗೆ ಗೊತ್ತೇ ಆಗಿಲ್ಲ. ಕಾರಣ, ದೇಶದಲ್ಲಿ ಈಗ ಲೋಕಸಭಾ ಚುನಾವಣೆ 2024 ಫಲಿತಾಂಶದ ನಂತರದ ರಾಜಕೀಯ ಚಟುವಟಿಕೆಗಳೇ ಜನರಿಗೆ ಹೆಚ್ಚು ಇಂಟ್ರೆಸ್ಟಿಂಗ್ ಎನಿಸುತ್ತಿದೆ.
ನಿನ್ನೆ ಭಾರತ ಮತ್ತು ಐರ್ಲೆಂಡ್ ನಡುವೆ ಟಿ20 ವಿಶ್ವಕಪ್ ಪಂದ್ಯವಿತ್ತು. ಭಾರತಕ್ಕೆ ಇದು ಮೊದಲ ಪಂದ್ಯ. ಸಾಮಾನ್ಯವಾಗಿ ಭಾರತ ಆಡುವ ಪಂದ್ಯವೆಂದರೆ ಕೋಟ್ಯಾಂತರ ಮಂದಿ ವೀಕ್ಷಿಸುತ್ತಾರೆ. ಅದು ಯಾವುದೇ ತಂಡವಾಗಿರಲಿ, ಬೌಲಿಂಗ್ ಇರಲಿ, ಬ್ಯಾಟಿಂಗ್ ಇರಲಿ ಕೋಟಿಗಟ್ಟಲೆ ಮಂದಿ ವೀಕ್ಷಣೆ ಮಾಡುತ್ತಿರುತ್ತಾರೆ.
ಆದರೆ ನಿನ್ನೆ ದೆಹಲಿಯಲ್ಲಿ ಎನ್ ಡಿಎ ಮತ್ತು ಇಂಡಿಯಾ ಬ್ಲಾಕ್ ನಡುವೆ ಸರ್ಕಾರ ರಚಿಸಲು ಪೈಪೋಟಿಯಿತ್ತು. ಈ ಬಗ್ಗೆ ಸಂಜೆ ಸಭೆ ನಡೆದಿತ್ತು. ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬ ಕುತೂಹಲವಿತ್ತು. ಹೀಗಾಗಿ ಜನರಿಗೆ ಟಿ20 ವಿಶ್ವಕಪ್ ಮರೆತೇ ಹೋಗಿತ್ತು.
ನಿನ್ನೆಯ ಪಂದ್ಯದಲ್ಲಿ ಭಾರತ ಫೀಲ್ಡಿಂಗ್ ಮಾಡುವಾಗ ಕೇವಲ 1 ಕೋಟಿ ಜನ ಆಪ್ ಮೂಲಕ ವೀಕ್ಷಣೆ ಮಾಡುತ್ತಿದ್ದರು. ಚುಟುಕು ಕ್ರಿಕೆಟ್ ಗೆ ಅಭಿಮಾನಿಗಳು ಜಾಸ್ತಿ. ಅದರಲ್ಲೂ ಭಾರತ ಆಡುವ ಪಂದ್ಯಗಳೆಂದರೆ ದಾಖಲೆಯ ವೀಕ್ಷಣೆಯಾಗುತ್ತದೆ. ಆದರೆ ಈ ಪಂದ್ಯಕ್ಕೆ ಕಡಿಮೆ ವೀಕ್ಷಕರಿರಲು ರಾಜಕೀಯ ಕಲಾಪಗಳೇ ಕಾರಣವಾಯಿತು ಎನ್ನಬಹುದು.