ಪರೋಕ್ಷವಾಗಿ ಪ್ರಧಾನಿ ಮೋದಿಯನ್ನು ಸರ್ವಾಧಿಕಾರಿ ಎಂದ ರಾಹುಲ್ ಗಾಂಧಿ
ಬುಧವಾರ, 3 ಫೆಬ್ರವರಿ 2021 (12:56 IST)
ನವದೆಹಲಿ : M ಅಕ್ಷರದಿಂದ ಆರಂಭವಾಗುವ ಸರ್ವಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡುವುದರ ಮೂಲಕ ಕಾಂಗ್ರೆಸ್ ನಾಯಕ ಪ್ರಧಾನಿ ಮೋದಿಯನ್ನು ಸರ್ವಾಧಿಕಾರಿ ಎಂದು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟರ್ ನಲ್ಲಿ M ಅಕ್ಷರದಿಂದ ಆರಂಭವಾಗುವ ಸರ್ವಾಧಿಕಾರಿಗಳ ಪಟ್ಟಿ ತಯಾರಿಸಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮಾರ್ಕೋಸ್, ಮುಸೋಲಿನಿ, ಮಿಲೊಸೆವಿಕ್, ಮುಬಾರಕ್, ಮೊಬುಟು, ಮುಷರಫ್, ಮೈಕೊಂಬೆರೊ ಹೆಸರು ಉಲ್ಲೇಖಿಸಲಾಗಿತ್ತು. ಹಾಗೇ ಪರೋಕ್ಷವಾಗಿ ಪ್ರಧಾನಿ ಮೋದಿಯನ್ನು ಆ ಪಟ್ಟಿಗೆ ಸೇರಿಸಿದ್ದಾರೆ. ಆ ಮೂಲಕ ಮೋದಿಯನ್ನು ಸರ್ವಾಧಿಕಾರಿಗಳ ಪಟ್ಟಿಗೆ ಸೇರಿಸಿದ್ದಾರೆ ಎನ್ನಲಾಗಿದೆ.