ಮೋದಿ ಎದುರಿಸಲು ರಾಹುಲ್ ಗಾಂಧಿಯೇ ಸರಿ: ಕಾಂಗ್ರೆಸ್ ಸಮಿತಿ ನಿರ್ಧಾರ

Krishnaveni K

ಶನಿವಾರ, 8 ಜೂನ್ 2024 (16:36 IST)
ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಯನ್ನೇ ಆಯ್ಕೆ ಮಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯ ಅಂಗೀಕರಿಸಿದೆ. ರಾಹುಲ್ ಗಾಂಧಿಯೇ ಈ ಸ್ಥಾನಕ್ಕೆ ಸೂಕ್ತ ಎಂದು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.

ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯಶಸ್ಸಿಗೆ ರಾಹುಲ್ ಗಾಂಧಿ ಕೊಡುಗೆ ಅಪಾರ. ಅವರ ಭಾರತ್ ಝೋಡೋ ಯಾತ್ರೆಯ ಯಶಸ್ಸಿನ ಫಲದಿಂಧ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವಂತಾಗಿದೆ. ಹೀಗಾಗಿ ವಿಪಕ್ಷ ನಾಯಕನ ಸ್ಥಾನಕ್ಕೆ ಅವರೇ ಸೂಕ್ತ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ.

ಸಂಸತ್ತಿನ ಒಳಗೂ ಆಡಳಿತ ಪಕ್ಷವನ್ನು ಎದುರಿಸಲು ರಾಹುಲ್ ಗಾಂಧಿಯೇ ಸೂಕ್ತ ಎಂದು ಈ ತೀರ್ಮಾನಕ್ಕೆ ಬರಲಾಗಿದೆ. ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಅಲಂಕರಿಸಲು ರಾಹುಲ್ ಗಾಂಧಿಗೆ ಸಿಡಬ್ಲ್ಯುಸಿ ವಿನಂತಿ ಮಾಡಿದೆ.

ಆದರೆ ಈ ಬಗ್ಗೆ ರಾಹುಲ್ ಗಾಂಧಿ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ. ಸದ್ಯದಲ್ಲೇ ಅವರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ವೇಣುಗೋಪಾಲ್ ಹೇಳಿದ್ದಾರೆ.  ಕಾಂಗ್ರೆಸ್ ನಲ್ಲಿ ಈಗ ರಾಹುಲ್ ನಾಯಕ ಸ್ಥಾನಕ್ಕೇರಲು ಎಲ್ಲರ ಒತ್ತಾಸೆಯಿದೆ. ಈಗ ಪಕ್ಷದೊಳಗಿನ ವಾತಾವರಣವೂ ಭಿನ್ನವಾಗಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ