ಮುಂಬೈ: ಕೇರಳ ಮಿನಿ ಪಾಕಿಸ್ತಾನವಾಗಿದೆ. ಈ ಕಾರಣಕ್ಕಾಗಿಯೇ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯವರು ಅಲ್ಲಿ ಚುನಾವಣೆಗೆ ನಿಂತರೆ ಗೆಲುವುದ ಪಡೆಯುತ್ತಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ನಿತೀಶ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪುಣೆಯಲ್ಲಿ ಸಮಾವೇಶವೊಂದರಲ್ಲಿ ಮಾತನಾಡುವಾಗ ನಿತೀಶ್ ರಾಣೆ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇರಳವು ಈಗ ಮಿನಿ ಪಾಕಿಸ್ತಾನವಾಗಿದೆ. ಹೀಗಾಗಿಯೇ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯಂತಹವರು ಗೆಲ್ಲುತ್ತಿದ್ದಾರೆ. ಯಾಕೆಂದರೆ ಭಯೋತ್ಪಾದಕರು ಅವರಿಗೆ ವೋಟ್ ಹಾಕುತ್ತಿದ್ದಾರೆ ಎಂದು ನಿತೀಶ್ ರಾಣೆ ಹೇಳಿದ್ದಾರೆ.
ನಿತೀಶ್ ರಾಣೆ ಹೇಳಿಕೆಗೆ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಪ್ರಧಾನಿ ಮೋದಿ ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಕೇವಲ 1 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಆದರೆ ಪ್ರಿಯಾಂಕ 4 ಲಕ್ಷ ಅಧಿಕ ದಾಖಲೆಗಳ ಮತಗಳ ಅಂತರದಲ್ಲಿ ಗೆದ್ದಿದ್ದನ್ನು ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಶಿವಸೇನೆ ತಿರುಗೇಟು ನೀಡಿದೆ.
ಇನ್ನು ತಮ್ಮ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೇ ನಿತೀಶ್ ರಾಣೆ ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದ್ದಾರೆ. ನನ್ನ ಟೀಕೆ ಕೇರಳದ ಜನರ ಬಗ್ಗೆ ಅಲ್ಲ, ಅಲ್ಲಿನ ಪರಿಸ್ಥಿತಿ ಬಗ್ಗೆ ಆಗಿತ್ತು ಅಷ್ಟೇ ಎಂದಿದ್ದಾರೆ.